ಪಾಟ್ನಾ: ಬಿಹಾರದಲ್ಲಿ ಕೊರೊನಾ ಆತಂಕದ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಬಿಹಾರದಲ್ಲಿ ಮಂಗಳವಾರ ಮೊದಲ ಬಾರಿಗೆ 10 ಸಾವಿರ ಕೊರೊನಾ ಪ್ರಕರಣಗಳ ವರದಿಯಾಗಿವೆ. ಇದರಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿದ್ದ ಏಮ್ಸ್ ಆಸ್ಪತ್ರೆಯ 384 ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೂ ಸೋಂಕು ತಗುಲಿದೆ.
ಪಾಟ್ನಾ ಏಮ್ಸ್ ಮೆಡಿಕಲ್ ಸೂಪರಿಟೆಂಡೆಂಟ್ ಇಂದು ತಮ್ಮ ಆಸ್ಪತ್ರೆಯ 384 ವೈದ್ಯರು ಸೇರಿದಂತೆ ಅನೇಕ ನರ್ಸಿಂಗ್ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಕೊರೊನಾ ಹಿನ್ನೆಲೆ ಬಿಹಾರದ ಪಂಚಾಯತಿ ಚುನಾವಣೆಗಳನ್ನ ಮುಂದೂಡಲಾಗಿದೆ. ಚುನಾವಣೆ ಏಪ್ರಿಲ್ ಅಂತ್ಯಕ್ಕೆ ನಿಗದಿಯಾಗಿತ್ತು. 15 ದಿನಗಳ ನಂತರ ಕೊರೊನಾ ಕುರಿತ ವಾಸ್ತವತೆ ಬಗ್ಗೆ ಸಮೀಕ್ಷೆ ನಡೆಸಿ ದಿನಾಂಕ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
Advertisement
Advertisement
ಮಂಗಳವಾರ ಬಿಹಾರದಲ್ಲಿ 10,455 ಹೊಸ ಪ್ರಕರಣಗಳು ವರದಿಯಾಗಿದ್ದು, 51 ಸೋಂಕಿತರು ಸಾವನ್ನಪ್ಪಿದ್ದಾರೆ. ಪ್ರತಿ ಗಂಟೆಗೆ ಇಬ್ಬರು ಕೊರೊನಾದಿಂದ ಬಿಹಾರದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದವರೆಗೂ 3,42,059 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,841 ಜನ ಸಾವನ್ನಪ್ಪಿದ್ದಾರೆ. ಸದ್ಯ 49,527 ಸಕ್ರಿಯ ಪ್ರಕರಣಗಳಿವೆ.