ಶ್ರೀನಗರ: ದೀಪಾವಳಿಗೆ ಭಾರತೀಯ ಸೇನೆ ಪಾಕಿಸ್ತಾನ ಬಂಕರ್ ಸ್ಫೋಟಿಸಿರುವ ವೀಡಿಯೋ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿರುವ ಇಂಡಿಯನ್ ಆರ್ಮಿ, ಪಾಕಿಸ್ತಾನದ ಮೂವರು ಕಮಾಂಡೋಗಳು ಸೇರಿದಂತೆ ಎಂಟು ಜನರನ್ನು ಹೊಡೆದುರಿಳಿಸಿದೆ. ಪಾಕಿಸ್ತಾನ ಇಂದು ಜಮ್ಮು-ಕಾಶ್ಮೀರದ ಪೂಂಛ್, ಕೆರನ್, ಗುರೆಜ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿತ್ತು. ಕುಪ್ವಾರದಿಂದ ಬಾರಾಮುಲ್ಲಾವರೆಗೆ ಪಾಕಿಸ್ತಾನಿ ಸೇನೆ ಫೈಯರಿಂಗ್ ನಡೆಸಿದೆ.
Advertisement
#WATCH | Jammu and Kashmir: Pakistan violated ceasefire along the Line of Control in Keran sector of Kupwara, earlier today.
(Video Source: Indian Army) pic.twitter.com/xxT57UkE35
— ANI (@ANI) November 13, 2020
Advertisement
ಬಾರಾಮುಲ್ಲಾ ಸೆಕ್ಟರ್ ನಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‍ಎಫ್ ಸಬ್ ಇನ್‍ಸ್ಪೆಕ್ಟರ್ ರಾಕೇಶ್ ಡೋಬಾಲ್ ಹುತಾತ್ಮರಾಗಿದ್ದಾರೆ. ಹುತಾತ್ಮ ರಾಕೇಶ್ ಉತ್ತರಾಖಂಡ ರಾಜ್ಯದ ಋಷಿಕೇಶ್ ಜಿಲ್ಲೆಯ ಗಂಗನಗರದ ನಿವಾಸಿ. ಉಡಿ ಸೆಕ್ಟರ್ ನಲ್ಲಿ ಸೇನೆಯ ಇಬ್ಬರು ಯೋಧರು ಮತ್ತು ಗುರೆಜ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಮೃತರಾದ ನಾಲ್ಕು ಜನರು ಉಡಿ ಸೆಕ್ಟರ್ ನಿವಾಸಿಗಳೆಂದು ವರದಿಯಾಗಿದೆ.
Advertisement
#WATCH | Pakistan violated ceasefire along Line of Control in the Keran sector, of Jammu and Kashmir, earlier today pic.twitter.com/zQRLrSyxhc
— ANI (@ANI) November 13, 2020
Advertisement
ದಾಳಿಗೆ ಪ್ರತ್ತುತ್ತರ ನೀಡಿದ ಇಂಡಿಯನ್ ಆರ್ಮಿ, ಪಾಕಿಸ್ತಾನದ ಬಂಕರ್, ಇಂಧನ ಪಂಪ್ ಮತ್ತು ಲಾಂಚ್ ಪ್ಯಾಡ್ ಸಹ ನೆಲಸಮಗೊಳಿಸಿದೆ. ಇದರಲ್ಲಿ 12ಕ್ಕೂ ಅಧಿಕ ಪಾಕ್ ಸೈನಿಕರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಎಂಟು ಜನ ಮೃತಪಟ್ಟಿದ್ದಾರೆ. ಬಂಕರ್ ಬ್ಲಾಸ್ಟ್ ಮಾಡಿರುವ ವಿಡಿಯೋ ಸುದ್ದಿ ಸಂಸ್ಥೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
BSF Sub-Inspector Rakesh Doval succumbs to injuries sustained during a ceasefire violation by Pakistan in Baramulla district of Jammu and Kashmir.
He was a resident of Ganga Nagar, Rishikesh, Uttarakhand
— ANI (@ANI) November 13, 2020
ಕದನ ವಿರಾಮ ಉಲ್ಲಂಘನೆ: ಈ ವರ್ಷ ಪಾಕಿಸ್ತಾನ ಬರೋಬ್ಬರಿ 4,052 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದರಲ್ಲಿ 128 ಬಾರಿ ನವೆಂಬರ್ ಮತ್ತು 394 ಬಾರಿ ಅಕ್ಟೋಬರ್ ನಲ್ಲಿಯೇ ಪಾಕ್ ನಿಯಮ ಉಲ್ಲಂಘಿಸಿದೆ. ಕಳೆದ ವರ್ಷ 3,233 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು.
ಸೈನಿಕರಿಗೆ ಪ್ರಧಾನಿ ‘ನಮೋ’
ಗಡಿಯಲ್ಲಿ ನಿಂತು ದೇಶ ಸೇವೆ ಸಲ್ಲಿಸುತ್ತಿರುವ ಯೋಧರನ್ನ ನಾವು ನೆನಪಿನಲ್ಲಿಟ್ಟುಕೊಂದು ಹಬ್ಬವನ್ನು ನಾವು ಆಚರಿಸಬೇಕಿದೆ. ಸೈನಿಕರ ಗೌರವಾರ್ಥವಾಗಿ ಎಲ್ಲರೂ ಮನೆಯಲ್ಲಿ ದೀಪ ಬೆಳಗಿ. ನೀವು ಗಡಿಯಲ್ಲಿರಬಹುದು ಆದ್ರೆ, ಇಡೀ ದೇಶ ನಿಮ್ಮೊಂದಿಗಿದೆ ಎಂದು ನಾನು ಹೇಳಲು ಇಷ್ಟಪಡುತ್ತೇನೆ. ಇಂದು ಗಡಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಕುಟುಂಬಗಳಿಗೆ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.