ಲಂಡನ್: ಪಾಕಿಸ್ತಾನ ತಂಡದ ಯುವ ಆಟಗಾರನೋರ್ವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೋಲುವ ರೀತಿ ಕಾಣುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಪಾಕಿಸ್ತಾನ ತಂಡದ ಯುವ ಆಟಗಾರ ಸೌದ್ ಶಕೀಲ್ ಇತ್ತೀಚೆಗೆ ಪಾಕಿಸ್ತಾನ ತಂಡದ ಪರ ಏಕದಿನ ಕ್ರಿಕೆಟ್ ಮೂಲಕ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುತ್ತಿರುವ ಶಕೀಲ್ ಬ್ಯಾಟಿಂಗ್ ವೇಳೆ ಹೆಲ್ಮೆಟ್ ಧರಿಸಿ ನಿಂತಿರುವ ಕೆಲವು ಭಂಗಿಗಳು ಇದೀಗ ವೈರಲ್ ಆಗುತ್ತಿದ್ದು, ಇದರಲ್ಲಿ ಶಕೀಲ್ ಅವರ ಗಡ್ಡ ಮತ್ತು ಬ್ಯಾಟ್ ಹಿಡಿದು ನಿಂತಿರುವ ಭಂಗಿ ವಿರಾಟ್ ಕೊಹ್ಲಿಯನ್ನು ಹೋಲುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದ ಶಕೀಲ್, ಮೊದಲ ಏಕದಿನ ಪಂದ್ಯದಲ್ಲಿ 5 ರನ್‍ಗಳಿಸಿ ನಿರಾಸೆ ಮೂಡಿಸಿದ್ದರು. ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ 56 ರನ್(77 ಎಸೆತ, 4 ಬೌಂಡರಿ) ಸಿಡಿಸಿ ಪಾಕಿಸ್ತಾನದ ಪರ ಮಿಂಚಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ
Every one is busy in watching football n no one noticed that kohli was playing for pakistan#Messi #PAKvENG #ENGvsPAK pic.twitter.com/iXeHxqLs5e
— ???? WALI NASIR ???? (@walinasir20) July 11, 2021
ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಏಕದಿನ ಸರಣಿ ಆಡುತ್ತಿದೆ. ಈ ನಡುವೆ ಭಾರತ ತಂಡ ಕೂಡ ಇಂಗ್ಲೆಂಡ್‍ನಲ್ಲಿದೆ ಹಾಗಾಗಿ ಕೊಹ್ಲಿ ಪಾಕಿಸ್ತಾನ ತಂಡದ ಪರ ಅಡುತ್ತಿದ್ದಾರೆ ಎಂದು ಶಕೀಲ್ ಅವರನ್ನು ಕಂಡು ಹಲವು ರೀತಿಯ ಚರ್ಚೆ, ಹಾಸ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Bro yh toh helmet mn Virat lag rha pic.twitter.com/afhnw7lqey
— LQ hypebot (@notlaiba_) July 10, 2021