ಇಸ್ಲಾಮಾಬಾದ್: ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಪ್ರತಿಷ್ಠಿತ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್‍ಎಸ್) ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆ ಮೂಲಕ ಪಾಕಿಸ್ತಾನ ಆಡಳಿತ ಸೇವೆಗೆ (ಪಿಎಎಸ್) ಆಯ್ಕೆಯಾಗಿದ್ದಾರೆ.
ಎಂಬಿಬಿಎಸ್ ಡಾಕ್ಟರ್ ಸನಾ ರಾಮಚಂದ್ ಸಿಎಸ್‍ಎಸ್ ಪರೀಕ್ಷೆ ಪಾಸ್ ಮಾಡಿದ ಹಿಂದೂ ಮಹಿಳೆಯಾಗಿದ್ದಾರೆ. ಇವರು ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಸಿಂಧ್ ಪ್ರಾಂತ್ಯದ ಶಿಕರ್‍ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ. ಲಿಖಿತ ಪರೀಕ್ಷೆಗೆ ಹಾಜರಾಗಿದ್ದ 18,553 ಅಭ್ಯರ್ಥಿಗಳ ಪೈಕಿ 221 ಮಂದಿ ಅಭ್ಯರ್ಥಿಗಳು ಸಿಎಸ್‍ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಸನಾ ರಾಮಚಂದ್ ಕೂಡಾ ಒಬ್ಬರಾಗಿದ್ದಾರೆ. ವಿಸ್ತಾರವಾದ ವೈದ್ಯಕೀಯ , ಮಾನಸಿಕ ಮತ್ತು ಮೌಖಿಕ ಪರೀಕ್ಷೆ ನಂತರ ಅಂತಿಮ ಆಯ್ಕೆ ಮಾಡಲಾಗುತ್ತದೆ.
Advertisement
Waheguru Ji Ka Khalsa Waheguru Ji Ki Fateh????
✨????❤️????❤❤❤
I’m pleased to share that by the grace of ALLAH ALMIGHTY, I have cleared the CSS 2020 and allocated to PAS. All credit goes to my parents. #css2021#100mostbeautifulwomen2021 pic.twitter.com/Jg3WqsWfWz
— Dr Sana Ramchand (@DrSanaRamchand) May 7, 2021
Advertisement
ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಸನಾ ರಾಮಚಂದ್, ವಹೇಗುರು ಜಿ ಕಾ ಖಲ್ಸಾ ವಹೇ ಗುರು ಜಿಕಿ ಫತೇಹ್, ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ ನಾನು ಸಿಎಸ್ ಎಸ್ 2020ನ್ನು ಪೂರ್ಣಗೊಳಿಸಿದ್ದೇನೆ. ಪಿಎಸ್‍ಎಸ್ ಹುದ್ದೆಗೆ ನೇಮಕವಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ. ಇದರ ಎಲ್ಲಾ ಕ್ರೆಡಿಟ್ ನನ್ನ ಪೋಷಕರಿಗೆ ಹೋಗುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಪಿಎಎಸ್ ಉನ್ನತ ಶ್ರೇಣಿಯಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಹಾಯಕ ಆಯುಕ್ತರನ್ನಾಗಿ ನಿಯೋಜಿಸಲಾಗುತ್ತದೆ ನಂತರ ಜಿಲ್ಲಾಧಿಕಾರಿಯಾಗಿ ಬಡ್ತಿ ನೀಡಲಾಗುತ್ತದೆ. ಸನಾ ರಾಮಚಂದ್ ಪಿಎಎಸ್ ಹುದ್ದೆಗೇರಿದ ಪ್ರಥಮ ಹಿಂದೂ ಮಹಿಳೆಯಾಗಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂ ಸಮುದಾಯಕ್ಕೆ ಸನಾ ರಾಮಚಂದ್ ಹೆಮ್ಮೆಯನ್ನುಂಟು ಮಾಡಿದ್ದಾರೆ ಎಂದು ಪಿಪಿಪಿ ಹಿರಿಯ ಮುಖಂಡ ಫರ್ಹತುಲ್ಲಾ ಬಾಬರ್ ಟ್ವೀಟ್ ಮಾಡಿದ್ದಾರೆ.