ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, 12 ವರ್ಷದ ಹಿಂದೂ ಬಾಲಕಿಯನ್ನು ಆಕೆಯ ಪೋಷಕರ ಮುಂದೆಯೇ ಅಪಹರಿಸಿರುವ ಘಟನೆ ಸಿಂಧ್ ಪ್ರಾಂತ್ಯದ ಮೀರ್ಪುರದಲ್ಲಿ ನಡೆದಿದೆ. ಇತ್ತ ಪೊಲೀಸರು ಬಾಲಕಿಯ ಪೋಷಕರ ಸಹಾಯಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ.
Advertisement
12 ವರ್ಷದ ಮೊಮಲ್ ಭೀಲ್ ಎಂಬ ಬಾಲಕಿಯನ್ನು ಕೆಲ ಮುಸ್ಲಿಂರು ಅಪಹರಿಸಿದ್ದಾರೆ. ಕುಟುಂಬಸ್ಥರು ದೂರು ದಾಖಲಿಸಲು ಠಾಣೆಗೆ ತೆರಳಿದ್ರೆ ಪೊಲೀಸರು ಸಹಾಯಕ್ಕೆ ಮುಂದಾಗಿಲ್ಲ. ಹೀಗಾಗಿ ಪೋಷಕರು ಮಗಳನ್ನು ಕಾಪಾಡುವಂತೆ ದೇವರ ಮೊರೆ ಹೋಗಿದ್ದಾರೆ ಎಂದು ವಾಯ್ಸ್ ಆಫ್ ಪಾಕಿಸ್ತಾನ ಮೈನಾರಿಟಿ ಟ್ವೀಟ್ ಮಾಡಿ, ಪೋಷಕರು ವಿಡಿಯೋ ಅಪ್ಲೋಡ್ ಮಾಡಿಕೊಂಡಿದೆ.
Advertisement
Advertisement
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಇದೇ ಮೊದಲ ಪ್ರಕರಣವೇನು ಇದಲ್ಲ. ಈ ಮೊದಲು ಸಿಂಧ ಪ್ರಾಂತ್ಯದಲ್ಲಿ ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗುತ್ತಿದೆ. ನಂತರ ಮುಸ್ಲಿಂ ಯುವಕರೊಂದಿಗೆ ಅವರ ಮದುವೆಯನ್ನು ಸಹ ಮಾಡಲಾಗುತ್ತದೆ. ಸಿಂಧ್ ಪ್ರಾಂತ್ಯದ ಬಾದಿನ್ ಎಂಬಲ್ಲಿ 102 ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಪ್ರತಿವರ್ಷ ಸುಮಾರು ಸಾವಿರಕ್ಕೂ ಹೆಚ್ಚು ಬಾಲಕಿ /ಯುವತಿಯರನ್ನು ಅಪಹರಿಸಿ ಮದುವೆ ಮಾಡಿಸುವ ಮೂಲಕ ಅವರನ್ನ ಮತಾಂತರಗೊಳಿಸಲಾಗುತ್ತದೆ.
Advertisement