ಚೆನ್ನೈ: ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 10 ರನ್‍ಗಳಿಂದ ಗೆದ್ದು ಐಪಿಎಲ್‍ನಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರೆ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಪರಿಣಾಮ ಹೈದರಾಬಾದ್ ಸೋಲನ್ನು ಅನುಭವಿಸಿತು.
Advertisement
Advertisement
ತಂಡದ ಮೊತ್ತ 10 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಔಟಾದರೆ ಅದೇ ಮೊತ್ತಕ್ಕೆ ವೃದ್ಧಿಮಾನ್ ಸಹಾ ಸಹ ಔಟಾದರು. ಮೂರನೇ ವಿಕೆಟಿಗೆ ಮನೀಶ್ ಪಾಂಡೆ ಮತ್ತು ಜಾನಿ ಬೈರ್‌ಸ್ಟೋವ್ 67 ಎಸೆತಕ್ಕೆ 92 ರನ್ ಜೊತೆಯಾಟವಾಡಿ ಶತಕದ ಗಡಿ ದಾಡಿಸಿದರು.
Advertisement
ಉತ್ತಮವಾಗಿ ಆಡುತ್ತಿದ್ದ ಬೈರ್‌ಸ್ಟೋವ್ 55 ರನ್(40 ಎಸೆತ, 5 ಬೌಂಡರಿ, 3 ಸಿಕ್ಸರ್)ಹೊಡೆದು ಔಟಾದರು. ಕೊನೆಯಲ್ಲಿ ಅಬ್ದುಲ್ ಸಮಾದ್ ಔಟಾಗದೇ 8 ಎಸೆತ ಎದುರಿಸಿ 2 ಸಿಕ್ಸರ್ ಹೊಡೆದು 19 ರನ್ ಗಳಿಸಿದರೆ ಮನೀಷ್ ಪಾಂಡೆ ಔಟಾಗದೇ 61 ರನ್(44 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದರು. ಪ್ರಸಿದ್ ಕೃಷ್ಣ 2 ವಿಕೆಟ್, ಶಕೀಬ್ ಉಲ್ ಹಸನ್, ಪ್ಯಾಟ್ ಕಮ್ನಿಸ್, ಅಂಡ್ರೆ ರಸಲ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಪರವಾಗಿ ಆರಂಭಿಕ ಆಟಗಾರ ನಿತೀಶ್ ರಾಣಾ 80 ರನ್(56 ಎಸೆತ, 9 ಬೌಂಡರಿ, 4 ಸಿಕ್ಸರ್) ಹೊಡೆದರೆ ರಾಹುಲ್ ತ್ರಿಪಾಠಿ 53 ರನ್(29 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 22 ರನ್(9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು ಹಿಗ್ಗಿಸಿ 180 ರನ್‍ಗಳ ಗಡಿಯನ್ನು ದಾಟಿಸಿದರು.
ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್, ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.