ಕೋಲ್ಕತ್ತಾ/ ಗುವಾಹಟಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆಗಳಿಗೆ ಎರಡನೇ ಹಂತದ ಚುನಾವಣೆ ಆರಂಭಗೊಂಡಿದೆ. ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು 30 ಕ್ಷೇತ್ರಗಳಿಗೆ ಚುನಾವಣೆ ನಡೆಯತ್ತಿದ್ದು, 191 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೇಶವ್ಯಾಪಿ ಗಮನ ಸೆಳೆದಿರುವ ನಂದಿ ಗ್ರಾಮದಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
Advertisement
I appeal to people to come out in large numbers to cast their vote as the whole country is looking at Nandigram. People are waiting to see if development or politics of appeasement will win here: Bharatiya Janata Party's Nandigram candidate, Suvendu Adhikari #WestBengalElections pic.twitter.com/rc6paGKSln
— ANI (@ANI) April 1, 2021
Advertisement
ಮಮತಾ ಬ್ಯಾನರ್ಜಿ ಹಾಗೂ ಒಂದುಕಾಲದಲ್ಲಿ ಅವರ ಆತ್ಮೀಯರೆನಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು ಭಾರೀ ಫೈಟ್ ಮೂಡಿಸಿದ ಕ್ಷೇತ್ರ ಎನಿಸಿಕೊಂಡಿದೆ. ಹೀಗಾಗಿ ಈ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನೂ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಘೋಷಿಸಿದೆ. ಕೇಂದ್ರೀಯ ಪಡೆಗಳ 651 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಟಿಎಂಸಿ ಹಾಗೂ ಬಿಜೆಪಿ ಎಲ್ಲಾ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಸಿಪಿಎಂ 15 ಹಾಗೂ ಅದರ ಮಿತ್ರಪಕ್ಷಗಳು 15 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.
Advertisement
West Bengal: Bharatiya Janata Party's Nandigram candidate Suvendu Adhikari on his way to a polling booth in the assembly constituency
"Voting is underway, the situation is under control. People are hoping for development," he says. pic.twitter.com/1Ke6xwzrVn
— ANI (@ANI) April 1, 2021
Advertisement
ಅಸ್ಸಾಂನ 39 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ 26 ಮಹಿಳೆಯರೂ ಸೇರಿದಂತೆ ಒಟ್ಟು 345 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 34 ಕ್ಷೇತ್ರ, ಅದರ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್ ಹಾಗೂ ಯುಪಿಪಿಎಲ್ ಕ್ರಮವಾಗಿ ಆರು ಹಾಗೂ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.
West Bengal: Preparations underway at a polling booth in South 24 Parganas, ahead of voting for the second phase of #WestBengalElections2021 today pic.twitter.com/Km3L1mbb9Y
— ANI (@ANI) April 1, 2021
ಅಸ್ಸಾಂ ಕರಿಮ್‍ಗಂಜ್ ಉತ್ತರ, ಕರಿಮ್‍ಗಂಜ್ ದಕ್ಷಿಣ, ಲಖಿಪುರ್, ಸಿಲ್ಚಾರ್, ಬಾದರ್‍ಪುರ, ಜಾಗಿರೋಡ್, ಲಹರಿಘಾಟ್, ನಲ್ಬಾರಿ, ಕಮಲ್‍ಪುರ, ಮತ್ತು ನೌಗಾಂಗ್ 39 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕೇಂದ್ರ ಸಶಸ್ತ್ರ ಪಡೆಗಳ 310 ಕಂಪನಿಗಳು ಭದ್ರತೆಗೆಂದು ನಿಯೋಜಿಸಲಾಗಿದೆ.