– 3 ಕ್ಷೇತ್ರಗಳಿಂದ 115ಕ್ಕೆ ಬಿಜೆಪಿ ಜಂಪ್
– ವರ್ಕೌಟ್ ಆಗದ ಕಾಂಗ್ರೆಸ್ ಮೈತ್ರಿ ತಂತ್ರಗಾರಿಕೆ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ-ಸೀ ವೋಟರ್ ಸಮೀಕ್ಷೆ ಹೇಳಿದೆ. 292 ಕ್ಷೇತ್ರಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದ ಬಿಜೆಪಿ 115ರಲ್ಲಿ ಗೆಲ್ಲಲಿದೆ ಎಂದು ಹೇಳಿದೆ.
Advertisement
2016ರ ಚುನಾವಣೆಯಲ್ಲಿ 211 ಕ್ಷೇತ್ರಗಳಲ್ಲಿ 211ರಲ್ಲಿ ಗೆಲುವು ದಾಖಲಿಸಿತ್ತು. ಈ ಬಾರಿ ಬಿಜೆಪಿಯ ತೀವ್ರ ಪೈಪೋಟಿ ನಡುವೆ 158 ರಲ್ಲಿ ಗೆಲ್ಲಲಿದೆ ಎಂದು ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಹೇಳಿದೆ. ಕಳೆದ ಬಾರಿಗಿಂತ ಟಿಎಂಸಿ 53 ಸ್ಥಾನ ಕಳೆದುಕೊಳ್ಳಲಿದೆ.
Advertisement
Advertisement
ಪಶ್ಚಿಮ ಬಂಗಾಳದಲ್ಲಿ ಬೃಹತ್ ಸಮಾವೇಶದ ಮೂಲಕ ಪ್ರಚಾರ ನಡೆಸಿದ್ದ ಬಿಜೆಪಿ 2016ರ ಚುನಾವಣೆಗಿಂತ 112ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಮಲ ಬಾವುಟ ಹಾರಿಸಲಿದೆ ಎಂದು ಸಮೀಕ್ಷೆ ಹೇಳಿದೆ. 2016ರಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಭಾಜಪ ಈ ಬಾರಿ 115ರಲ್ಲಿ ಜಯದ ಮಾಲೆ ಧರಿಸಲಿದೆ ಎಂಬುವುದು ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ.
Advertisement
#May2WithTimesNow | TIMES NOW-CVoter Exit Poll: Alliance-wise seat share projection in West Bengal. pic.twitter.com/oa7OnorLX5
— TIMES NOW (@TimesNow) April 29, 2021
ಇನ್ನೂ ಕಾಂಗ್ರೆಸ್ ಮೈತ್ರಿ (ಕಾಂಗ್ರೆಸ್+ಎಡ+ಐಎಸ್‍ಎಫ್) 19 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೈತ್ರಿ ಪಶ್ಚಿಮ ಬಂಗಾಳದಲ್ಲಿಯೂ ವರ್ಕೌಟ್ ಆದಂತೆ ಕಾಣಿಸುತ್ತಿಲ್ಲ. ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದ ಜನತೆ ಯಾವುದೇ ಪಕ್ಷೇತರರಿಗೆ ಮಣೆ ಹಾಕಿಲ್ಲ.
ಶೇಕಡಾವಾರು ಮತಗಳಿಕೆ: ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ ಪ್ರಕಾರ ಟಿಎಂಸಿ ಶೇ.42.1 (-ಶೇ.2.6), ಬಿಜೆಪಿ ಶೇ.39.2 (+ಶೇ.30), ಕಾಂಗ್ರೆಸ್ ಮೈತ್ರಿ ಶೇ.15.4 (-ಶೇ.23.8) ಮತ್ತು ಇತರರು ಶೇ.3.3 (-ಶೇ.3.6) ರಷ್ಟಿದೆ.
#May2WithTimesNow | TIMES NOW-CVoter Exit Poll: Alliance-wise vote share projection in West Bengal. pic.twitter.com/FA9JYKkNWF
— TIMES NOW (@TimesNow) April 29, 2021
ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು 148 ಶಾಸಕರ ಬಲ ಬೇಕು. ಈ ಸಮೀಕ್ಷೆಯ ಪ್ರಕಾರ ಟಿಎಂಸಿ ಸರಳವಾಗಿ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ. ಆದ್ರೆ ಸಿಎನ್‍ಎಕ್ಸ್ ಟಿಎಂಸಿಗೆ 128-138, ಬಿಜೆಪಿಗೆ 138-148 ಮತ್ತು ಕಾಂಗ್ರೆಸ್ ಮೈತ್ರಿ ಕೇವಲ 11-21ರ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.