ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಯಾವಲ್ ತಾಲೂಕಿನ ಕಿಂಗವೋ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರೂ ಕರ್ಹಲಾ ಮತ್ತು ರಾವೇರ್ ಜಿಲ್ಲೆ ಮೂಲದ ಕೂಲಿ ಕಾರ್ಮಿಕರು. ಪಪ್ಪಾಯ ಹಣ್ಣುಗಳನ್ನ ತುಂಬಿಕೊಂಡು ಹೊರಟಿದ್ದ ಟ್ರಕ್ ಕಿಂಗವೋ ಗ್ರಾಮದ ಬಳಿ ಪಲ್ಟಿಯಾಗಿದೆ. ಪಲ್ಟಿ ಪರಿಣಾಮ ಲಾರಿಯಲ್ಲಿದ್ದ 17 ಜನರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ.
Maharashtra: 15 people died, two injured after a vehicle overturned near Kingaon village in Yawal taluka of Jalgaon district last night. More details awaited.
— ANI (@ANI) February 15, 2021
ಚಾಲಕ ನಿದ್ದೆಗೆ ಜಾರಿದ್ದರಿಂದ ಅಪಘಾತ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತದೇಹಗಳನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅಪಘಾತ ವಿಷಯ ತಿಳಿಯುತ್ತಲೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
Heart-wrenching truck accident in Jalgaon, Maharashtra. Condolences to the bereaved families. May the injured recover at the earliest: PM Narendra Modi
(File photo) pic.twitter.com/e5EDCrSDle
— ANI (@ANI) February 15, 2021