– ನಟಿಯ ಅಪಾರ್ಟ್‍ಮೆಂಟಿಗೆ ಬಂದು ರೇಪ್
ಕೊಲ್ಕತ್ತಾ: ಬೆಂಗಾಲಿಯ 26 ವರ್ಷದ ನಟಿ ಮತ್ತು ರೂಪದರ್ಶಿಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಕೊಲ್ಕತ್ತಾದ ಬಿಜೋಯ್ ಪ್ರದೇಶದಲ್ಲಿ ವರದಿಯಾಗಿದೆ.
ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಮೂಲಕ ನಟಿ ಖ್ಯಾತಿ ಪಡೆದುಕೊಂಡಿದ್ದರು. ಜುಲೈ 8 ರಂದು ಜಾದವ್‍ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಾಗಿದೆ.
ಜುಲೈ 5 ರಂದು ನಟಿಗೆ ಪರಿಚಿತವಿರುವ ವ್ಯಕ್ತಿ ಬಿಜೋಯ್‍ದಲ್ಲಿರುವ ಅವರ ಅಪಾರ್ಟ್‍ಮೆಂಟಿಗೆ ಬಂದಿದ್ದನು. ಆತ ಆರ್ಥಿಕ ಸಹಾಯವನ್ನು ಕೇಳಿಕೊಂಡು ನಟಿಯ ಬಳಿ ಬಂದಿದ್ದನು. ಆದರೆ ಫ್ಲ್ಯಾಟ್‍ನಲ್ಲಿ ನಟಿ ಏಕಾಂಗಿಯಾಗಿ ಇರುವುದನ್ನು ನೋಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೇ ಆತ ಅದನ್ನು ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನಟಿ ಧೈರ್ಯದಿಂದ ಜಾದವ್‍ಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲಿಸರು ತುಳಿಸಿದ್ದಾರೆ.
ನಟಿ ಮೂಲತಃ ಪಶ್ಚಿಮ ಬಂಗಾಳದ ನಾಡಿಯಾ ಮೂಲದವರಾಗಿದ್ದು, ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದರು. ಅತ್ಯಾಚಾರ ಎಸಗಿರುವ ವ್ಯಕ್ತಿ ಮತ್ತು ನಟಿ ಇಬ್ಬರು ಸ್ನೇಹಿತರಾಗಿದ್ದು, ಕೆಲವು ವರ್ಷಗಳ ಹಿಂದೆ ಜಗಳ ಮಾಡಿಕೊಂಡು ದೂರವಾಗಿದ್ದರು. ಲಾಕ್‍ಡೌನ್ ಸಮಯದಲ್ಲಿ ಆ ವ್ಯಕ್ತಿ ಫೇಸ್‍ಬುಕ್ ಮೂಲಕ ಮತ್ತೆ ನಟಿಯನ್ನು ಸಂಪರ್ಕಿಸಿ ಅವಳನ್ನು ಭೇಟಿಯಾಗುವಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ ನಟಿ ಆತನನ್ನು ಭೇಟಿಯಾಗಲು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.
ಕೊನೆಗೆ ಆ ವ್ಯಕ್ತಿ ತನ್ನ ವ್ಯವಹಾರದಲ್ಲಿ ನಷ್ಟವಾಗಿದೆ. ಹೀಗಾಗಿ ತನಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಮನವೊಲಿಸಿದ್ದಾನೆ. ಹೀಗಾಗಿ ನಟಿಯಿದ್ದ ಅಪಾರ್ಟ್‍ಮೆಂಟಿಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಪೊಲೀಸರು ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.