ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ 144 ದಿನಗಳ ಬಳಿಕ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರ ಬಂದಿದ್ದಾರೆ. ಜಾಮೀನು ಸಿಕ್ಕು ನಾಲ್ಕು ದಿನಗಳ ಬಳಿಕ ಇಂದು ರಿಲೀಸ್ ಆಗಿದ್ದಾರೆ.
ಗುರುವಾರ ಸುಪ್ರೀಂಕೋರ್ಟ್ ನ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿತ್ತು. ಆದ್ರೆ ಜಾಮೀನು ಪ್ರಕ್ರಿಯೆ ತಡವಾದ ಹಿನ್ನೆಲೆ ಮತ್ತೆ ನಾಲ್ಕು ದಿನ ರಾಗಿಣಿ ಕಳೆಯುವಂತಾಗಿತ್ತು. ಜಾಮೀನು ಸಿಕ್ಕ ದಿನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ರಾಗಿಣಿ ತಾಯಿ, ವಿಷಯ ಕೇಳಿ ಸಂತಸವಾಯ್ತು. ಇವತ್ತು ನಮಗೆ ಲಕ್ಕಿ ಡೇ ಎಂದು ಸಂತೋಷ ಹಂಚಿಕೊಂಡಿದ್ದರು.
Advertisement
Advertisement
ನನ್ನ ಮಗಳು 145 ದಿನಗಳ ನಂತರ ಬರುತ್ತಿರೋದು ಸಾಕಷ್ಟು ಖುಷಿಯ ವಿಚಾರ. ವಕೀಲರು ಮತ್ತು ಜಡ್ಜ್ ಗಳಿಗೆ ಧನ್ಯವಾದಗಳು. ರಾಗಿಣಿ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾತನಾಡಿದ್ದೇವೆ. ಉಸಿರಾಟದ ತೊಂದರೆ ಇದೆ. ನಾನು ರಾಗಿಣಿ ಜೊತೆ ಮಾತನಾಡಿದ್ದೆ. ಮಗಳು ಖುಷಿಯಾಗಿ ಧೈರ್ಯವಾಗಿದ್ದಾಳೆ. ಮಗಳ ಜೊತೆ ಮಾತನಾಡಿ ತುಂಬಾ ದಿನವಾಯ್ತು ಇಂದು ನಾಳೆ ಮಗಳ ಜೊತೆ ಮಾತನಾಡಿ ಅಮೇಲೆ ಕಾರ್ಯಕ್ರಮಗಳ ಬಗ್ಗೆ ಪ್ಲಾನ್ ಮಾಡಲಾಗುತ್ತೆ ಎಂದು ರಾಗಿಣಿ ತಾಯಿ ಹೇಳಿದ್ದಾರೆ.
Advertisement
Advertisement
ಪ್ರಕರಣದ ಹಿನ್ನೆಲೆ:
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ರಾಗಿಣಿಗೆ ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಗ್ಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿತ್ತು.
ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯನ್ನು ಬಂಧಿಸಲಾಗಿತ್ತು. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.
ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.