ಪಬ್‍ಜಿ ಆಡಲು ಇಂಟರ್ನೆಟ್ ಹಾಕಿಸದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಸಾವು

Public TV
1 Min Read
HBL BOY

ಹುಬ್ಬಳ್ಳಿ: ಪಬ್‍ಜಿ ಗೇಮ್ ಬ್ಯಾನ್ ಆಗಿದ್ದರು ಕೂಡ ಆಟ ಬಾಲಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಪಬ್‍ಜಿ ಆಟವಾಡಲು ಇಂಟರ್ನೆಟ್ ಹಾಕಿಸದೇ ಇರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದ ತೇಜಸ್ ಸಿಡ್ಲಾಪುರ (17) ಮೃತಪಟ್ಟ ಬಾಲಕ. ಆಗಸ್ಟ್ 31 ರಂದು ವಿಷ ಸೇವಿಸಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ba78c0d7 a8a9 462a 92ad 8b6228239709

ಮೊಬೈಲ್‍ನಲ್ಲಿ ಇಂಟರ್ನೆಟ್ ಖಾಲಿ ಆಗಿತ್ತು. ಖಾಲಿ ಆಗಿದ್ದ ಇಂಟರ್ನೆಟ್ ಹಾಕಿಸದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ತಾನೆ ಎಸ್‍ಎಸ್‍ಎಲ್‍ಸಿ ಮುಗಿಸಿದ್ದ ಬಾಲಕ ಪಬ್ ಜೀ ಆಟಕ್ಕೆ ಬಲಿಯಾಗಿದ್ದಾನೆ.

ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Police Jeep 1

Share This Article
Leave a Comment

Leave a Reply

Your email address will not be published. Required fields are marked *