ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್- ನಾಳೆಯಿಂದ ಬಿಎಂಟಿಸಿಯಲ್ಲಿ ಟಿಕೆಟ್ ವ್ಯವಸ್ಥೆ

Public TV
2 Min Read
BUS TICKET 1

ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಬಿಎಂಟಿಸಿ ನಾಳೆಯಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದೆ.

Public Tv IMPACT

    ಪ್ರಯಾಣಿಕರ ಆಕ್ರೋಶವೇನಿತ್ತು?
ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮತ್ತೆ ತಮ್ಮ ಸಂಚಾರವನ್ನು ಪುನಾರಂಭಿಸಿದೆ. ಆದರೆ ಬಿಎಂಟಿಸಿಯಲ್ಲಿ ಪಾಸ್ ಇರುವವರು ಮಾತ್ರ ಓಡಾಡಲು ಅವಕಾಶ ನೀಡಲಾಗಿತ್ತು. ಇದರಿಂದ ಒಂದು, ಎರಡು ಸ್ಟಾಟ್‍ಗೆ ದಿನದ ಪಾಸ್ ತೆಗೆದುಕೊಳ್ಳಿ ಎಂದು ಕಂಡಕ್ಟರ್ ಹೇಳುತ್ತಿದ್ದಾರೆ. ಬಿಎಂಟಿಸಿ ಪ್ರಯಾಣಿಕರಿಗೆ ಬಸ್ ಟಿಕೆಟ್ ಕೊಡುವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕಂಡಕ್ಟರ್ ಪ್ರಯಾಣಿಕರಿಗೆ ಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಪಾಸ್ ದರ ದುಬಾರಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

vlcsnap 2020 05 25 12h51m25s75

1-2 ಸ್ಟಾಪ್‍ಗೆ 10 ರೂಪಾಯಿ ಕೊಡುತ್ತಿದ್ದೇವೆ. ಈಗ ಟಿಕೆಟ್ ಕೊಡುತ್ತಿಲ್ಲ. ಪಾಸ್ ತೆಗೆದುಕೊಳ್ಳಿ ಎಂದು ಕಂಡಕ್ಟರ್ ಹೇಳುತ್ತಿದ್ದಾರೆ. ಒಂದು ದಿನದ ಪಾಸ್ 70 ರೂಪಾಯಿ ಇದೆ. ನನ್ನ ಪತ್ನಿ ಗಾರ್ಮೆಂಟ್ಸ್ ಗೆ ಹೋಗೋದು. ಲಾಕ್‍ಡೌನ್‍ನಿಂದ ಸಂಬಳ ಇಲ್ಲ. ಹೀಗಿರುವಾಗ ಪಾಸ್ ತೆಗೆದುಕೊಂಡು ಹೋಗಿ ಅನ್ನೋದು ಸರಿಯಲ್ಲ. ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಮತ್ತೊಬ್ಬ ಪ್ರಯಾಣಿಕ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು.

ಈ ವರದಿಯ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ನಾಳೆಯಿಂದ ಟಿಕೆಟ್ ನೀಡಲು ನಿರ್ಧರಿಸಿದೆ. ನಾಳೆಯಿಂದ ಬಸ್‍ಗಳಲ್ಲಿ ಟಿಕೆಟ್ ನೀಡಲು ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸರ್ಕಾರ ಬಿಎಂಟಿಸಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನಾಳೆಯಿಂದ ಬಿಎಂಟಿಸಿ ಟಿಕೆಟ್ ನೀಡಲಿದೆ. ಈ ಮೂಲಕ ಬಿಎಂಟಿಸಿ ಪಾಸ್ ಬದಲು ಟಿಕೆಟ್ ನೀಡಲು ನಿರ್ಧಾರ ಮಾಡಿದೆ.

BUS TICKET

ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. 5 ರೂ, 10 ರೂ, 15, 20, 25 ರೂ. ಮಾದರಿಯಲ್ಲಿ ಬಿಎಂಟಿಸಿ ಟಿಕೆಟ್ ನೀಡಲಿದೆ. ಚಿಲ್ಲರೆ ಸಮಸ್ಯೆ, ಪದೇ ಪದೇ ಕೈ ಬದಲಾವಣೆ ಮಾಡೋದು ತಪ್ಪಿಸಲು ಸ್ಲಾಬ್ ಮಾದರಿ ಟಿಕೆಟ್ ನೀಡಲಿದೆ ಎಂದು ಪಬ್ಲಿಕ್ ಟಿವಿಗೆ ಬಿಎಂಟಿಸಿ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ಸ್ಲಾಬ್ ರೀತಿ ಟಿಕೆಟ್
* 2 ಕಿ.ಮೀ                            –  5 ರೂ.
* 3 ರಿಂದ 4 ಕಿ.ಮೀ               – 10 ರೂ.
* 5 ರಿಂದ 6 ಕಿ.ಮೀ               – 15 ರೂ.
* 7 ರಿಂದ 14 ಕಿ.ಮೀ             –  20 ರೂ.
* 15 ರಿಂದ 40 ಕಿ.ಮೀ          –  25 ರೂ.
* 41 ಕಿಮೀ ಹೆಚ್ಚಿನ ದೂರ  – 30 ರೂ.

Share This Article
Leave a Comment

Leave a Reply

Your email address will not be published. Required fields are marked *