ಯಾದಗಿರಿ: ಏಕಕಾಲದಲ್ಲಿ ಮೂರು ಮಕ್ಕಳಿಗೆ ಜನ್ಮನೀಡಿ ಸುದ್ದಿಯಾಗಿದ್ದ ಜಿಲ್ಲೆಯ ರಾಮಸಮುದ್ರ ಗ್ರಾಮದ ಪದ್ಮಾ ಮತ್ತು ನಾಗರಾಜ್ ದಂಪತಿಗೆ ಸಹಾಯದ ಮಹಾಪೂರವೇ ಹರಿದು ಬಂದಿದೆ.
Advertisement
ಪಬ್ಲಿಕ್ ಟಿವಿ ವೆಬ್‍ಸೈಟಿನಲ್ಲಿ ಸುದ್ದಿ ಬಿತ್ತರವಾದ ಕೇವಲ ಒಂದು ಗಂಟೆ ಅಂತರದಲ್ಲಿ ಹತ್ತಾರು ಜನ ಪದ್ಮಾ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಸುದ್ದಿ ನೋಡಿದ ಕೂಡಲೇ ಯಾದಗಿರಿ ಮತ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕೊರೊನಾನಿಂದ ಕೋವಿಡ್ ಆಸ್ಪತ್ರೆಯಲ್ಲಿದ್ದರೂ ಪದ್ಮಾ ಕುಟುಂಬದ ಸಂಕಷ್ಟಕ್ಕೆ ಮರುಗಿದ್ದಾರೆ. ಇದನ್ನೂ ಓದಿ: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
Advertisement
Advertisement
ವೈಯಕ್ತಿಕ ಧನಸಹಾಯ ಮಾಡಿದ ಶಾಸಕರು, ಕೂಡಲೇ ತಹಶೀಲ್ದಾರ್ ಚನ್ನಮಲ್ಲಪ್ಪರಿಗೆ ಕರೆ ಮಾಡಿ ಸರ್ಕಾರಿ ಸೌಲಭ್ಯ ಈ ಕೂಡಲೇ ಒದಗಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಜಿಲ್ಲಾಸ್ಪತ್ರೆ ಅವರ ಆಪ್ತ ಸಹಾಯಕ ಮತ್ತು ತಹಶೀಲ್ದಾರ್ ಚನ್ನಮಲ್ಲಪ್ಪರನ್ನು ಕಳುಹಿಸಲು ಮುಂದಾದರು. ಇದೇ ವೇಳೆ ತಹಶೀಲ್ದಾರ್ ಚನ್ನಮಲ್ಲಪ್ಪ ಸಹ ವೈಯಕ್ತಿಕ ಧನ ಸಾಹಾಯ ಮಾಡಿ ಮಾನವೀಯತೆ ಮೆರೆದರು. ಪದ್ಮಾ ಆಸ್ಪತ್ರೆಯಿಂದ ಬಿಡುಗಡೆಯಾದ ದಿನದಿಂದ ಅವರ ಕುಟುಂಬಕ್ಕೆ ಬೇಕಾಗುವ ಒಂದು ತಿಂಗಳ ರೇಷನ್ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದಾರೆ.
Advertisement
ಹೆಸರು ಹೇಳಲು ಇಚ್ಚಿಸದ ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಸಹ ಪದ್ಮಾ ಕುಟುಂಬದ ಕಷ್ಟಕ್ಕೆ ಮಿಡಿದಿದ್ದಾರೆ. ಈಗಾಗಲೇ ಪದ್ಮಾ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿರುವ ಇವರು, ಜಿಲ್ಲಾಸ್ಪತ್ರೆಯಲ್ಲಿ ಪದ್ಮಾ ಅವರಿಗೆ ಪ್ರತ್ಯೇಕ ಕೊಠಡಿ ನೀಡಿ ಅದರ ಸಂಪೂರ್ಣ ವೆಚ್ಚ ಭರಿಸಲು ಮುಂದಾಗಿದ್ದಾರೆ. ಶೀಘ್ರವಾಗಿ ತಮ್ಮ ಸಂಕಷ್ಟ ಮಿಡಿದ ಪಬ್ಲಿಕ್ ಟಿವಿ ಮತ್ತು ಸಹಾಯ ಮಾಡಿದ ಶಾಸಕ, ತಹಶೀಲ್ದಾರರಿಗೆ ಪದ್ಮಾ ಮತ್ತು ಕುಟುಂಬಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.