– ಪಬ್ಲಿಕ್ ವರದಿ ಬಳಿಕ ಅತ್ತಿಬೆಲೆಯಲ್ಲಿ ಕಳ್ಳರ ರಹದಾರಿ ಬಂದ್
ಬೆಂಗಳೂರು: ಕರ್ನಾಟಕಕ್ಕೆ ಗಡಿಭಾಗವೇ ಟೆನ್ಶನ್ ಹೆಚ್ಚಿಸಿತ್ತು. ಯಾಕೆಂದರೆ ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಕಳ್ಳದಾರಿಯಲ್ಲಿ ಜನ ಎಗ್ಗಿಲ್ಲದೇ ಸಾಗುತ್ತಿದ್ದರು. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಲ್ಲಿ ಖಡಕ್ ಸೂಚನೆ ಕೊಟ್ಟಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‍ಗಳಿಂದ ಕಳ್ಳ ಮಾರ್ಗದಲ್ಲಿ ಬರುವವರಿಗೆ ಪ್ರವೇಶ ನೀಡಬೇಡಿ. ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಗಡಿಗಳು ಬಂದ್ ಮಾಡಲಾಗಿದೆ. ಆದ್ದರಿಂದ ಈ ರಾಜ್ಯಗಳಿಂದ ಕಳ್ಳ ಮಾರ್ಗಗಳಿಂದ ಬರುವವರ ಮೇಲೆ ನಿಗಾ ಇರಲಿ. ಕಳ್ಳ ಮಾರ್ಗದಲ್ಲಿ ಎರಡು ಜಿಲ್ಲೆಗಳಿಗೂ ಬಂದಿರುವವರನ್ನು ಪತ್ತೆ ಹಚ್ಚಿ. ಬೇರೆ ರಾಜ್ಯಗಳಿಂದ ಕಳ್ಳ ಮಾರ್ಗದಿಂದ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ ಎಂದು ಖಡಕ್ ಸೂಚನೆ ನೀಡಿದರು.
Advertisement
Advertisement
ಕದ್ದು ಮುಚ್ಚಿ ಬರುವುದಕ್ಕೆ ಅವಕಾಶ ಕೊಡಬೇಡಿ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿತ್ತು. ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಳದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರದಿಂದ ಬರುವವರನ್ನು ಸದ್ಯ ನಿಲ್ಲಿಸಲಾಗಿದೆ. ಆದರೆ ಕಳ್ಳಮಾರ್ಗದಿಂದ ಬಂದಿರುವವರಿಂದನೂ ಸೋಂಕು ಹಬ್ಬುವ ಸಾಧ್ಯತೆ ಇದೆ. ಹೀಗಾಗಿ ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಎಚ್ಚರವಹಿಸಿ ಎಂದು ಸೂಚನೆ ನೀಡಿದರು.
Advertisement
Advertisement
ತಮಿಳುನಾಡು ಕರ್ನಾಟಕ ಹೆದ್ದಾರಿಯಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಅಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗುತ್ತೆ. ಹೀಗಾಗಿ ಕ್ವಾರಂಟೈನ್ ಆಗುವುದನ್ನು ತಪ್ಪಿಸಿಕೊಳ್ಳಲು ನೂರಾರು ಜನ ತೋಪು, ಹೊಲಗದ್ದೆ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದರು. ಜನ ಬಳ್ಳೂರು ಸೋಲೂರು ಗ್ರಾಮಗಳ ಮುಖಾಂತರ ಬೆಂಗಳೂರು ಪ್ರವೇಶಿಸುತ್ತಿದ್ದರು. ಜನ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿದರೂ ಅದರ ಮೇಲೆ ಸಾಹಸ ಮಾಡಿ ತಮಿಳುನಾಡಿನ ಜನ ರಾಜ್ಯಕ್ಕೆ ನುಗ್ಗುತ್ತಿದ್ದರು ಎಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೆ ಸಿಎಂ ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಸುವಂತೆ ಆದೇಶಿಸಿದ್ದಾರೆ.
ಇನ್ನೂ ಪಬ್ಲಿಕ್ ವರದಿ ಬಳಿಕ ಅತ್ತಿಬೆಲೆಯಲ್ಲಿ ಕಳ್ಳರ ರಹದಾರಿಯನ್ನು ಪೊಲೀಸರು ಬಂದ್ ಮಾಡಿದ್ದಾರೆ. ಈ ಮೂಲಕ ಕೊರೊನಾ ಕಳ್ಳ ಕಿಂಡಿ ಅಭಿಯಾನಕ್ಕೆ ಪೊಲೀಸರ ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚನ್ನಣ್ಣನವರ್ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಹೊರ ರಾಜ್ಯದಿಂದ ಕಳ್ಳದಾರಿಯಲ್ಲಿ ಬಂದ ಏಳು ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮಕ್ಕೆ ತಮಿಳುನಾಡಿನಿಂದ ಬಂದಿದ್ದರು. ಇವರು ಯಾವುದೇ ತಪಾಸಣೆ ಇಲ್ಲದೆ ಕಳ್ಳದಾರಿಯಲ್ಲಿ ಬಂದಿದ್ದರು. ಹೀಗಾಗಿ ತ್ಯಾಮಗೊಂಡ್ಲು ಆರೋಗ್ಯ ಅಧಿಕಾರಿಗಳು ಪಾನಿಪುರಿ ಮಾರಾಟ ಮಾಡುತಿದ್ದ ಒಂದೇ ಕುಟುಂಬದ 7 ಮಂದಿಯನ್ನು ಕ್ವಾರಂಟೈನ್ ಮಾಡಿದ್ದಾರೆ.