– ಪೋಷಕರಿಗೆ ಸಿಹಿ ಸುದ್ದಿ
– ಬೋಧನಾ ಶುಲ್ಕ ಮಾತ್ರ ತೆಗದುಕೊಳ್ಳಬೇಕು
– ಸರಣಿ ಸುದ್ದಿ ಪ್ರಕಟಿಸಿದ್ದ ಪಬ್ಲಿಕ್ ಟಿವಿ
ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ಕೊನೆಗೂ ಕಡಿತಗೊಂಡಿದೆ. ಕೋವಿಡ್ 19ನಿಂದ ಸಂಕಷ್ಟಕ್ಕೆ ತುತ್ತಾಗಿದ್ದ ಪೋಷಕರ ಪರ ನಿಂತಿದ್ದ ಪಬ್ಲಿಕ್ ಟಿವಿ ಸರಣಿ ಅಭಿಯಾನ ನಡೆಸಿದ ಫಲ ಎಂಬಂತೆ ಶೇ.30ರಷ್ಟು ಶುಲ್ಕ ಕಡಿತವಾಗಿದೆ.
Advertisement
ಹಲವು ದಿನಗಳಿಂದ ಸರ್ಕಾರ ಮತ್ತು ಪೋಷಕರ ಕಚ್ಚಾಟಕ್ಕೆ ಕಾರಣವಾಗಿದ್ದ ಖಾಸಗಿ ಶಾಲಾ ಶುಲ್ಕದ ಬಗ್ಗೆ ಕಡೆಗೂ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 70 ರಷ್ಟು ಮಾತ್ರ ಬೋಧನಾ ಶುಲ್ಕಗಳನ್ನು ಮಕ್ಕಳಿಂದ ಪಡೆದುಕೊಳ್ಳಬೇಕು. ಇದನ್ನು ಹೊರತು ಪಡಿಸಿ ಅಭಿವೃದ್ಧಿ ಶುಲ್ಕ ಡೊನೇಷನ್ ಫೀಸ್‍ಗಳನ್ನು ಯಾವುದೇ ಕಾರಣಕ್ಕೂ ಪಡೆದುಕೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
Advertisement
Advertisement
Advertisement
ಖಾಸಗಿ ಶಾಲೆಗಳು ಪಡೆಯುವ ಬೋಧನಾ ಶುಲ್ಕದಲ್ಲಿ ಶೇ.30 ರಷ್ಟು ಕಡಿತ ಗೊಳಿಸಿರುವ ಸರ್ಕಾರ ಕೇವಲ ಶೇ.70 ರಷ್ಟು ಮಾತ್ರ ಫೀಸ್ ವಿದ್ಯಾರ್ಥಿಗಳಿಂದ ಪಡೆದು ಕೊಳ್ಳಬೇಕು ಎನ್ನುವ ಮೂಲಕ ಪೋಷಕರಿಗೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ಪೂರ್ಣ ಶುಲ್ಕವನ್ನು ಕಟ್ಟಿದ್ದರೆ ಮುಂದಿನ ವರ್ಷ ಶುಲ್ಕ ವಿನಾಯಿತಿ ಕೊಡಬೇಕು. ಇದು ಎಲ್ಲಾ ರೀತಿ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಪಠ್ಯ ಬೋಧಿಸುವ ಎಲ್ಲಾ ಖಾಸಗಿ ಶಾಲೆಗಳಿಗೂ ಈ ನಿರ್ಧಾರ ಅನ್ವಯಿಸುತ್ತದೆ. 2020ಮತ್ತು 2021ನೇ ಸಾಲಿಗೆ ಸೀಮಿತವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಇದರೊಂದಿಗೆ ಸ್ಕೂಲ್ ಬಸ್ ಫೀಸ್ ಮತ್ತು ಸ್ವಿಮ್ಮಿಂಗ್ ಪೂಲ್‍ಗಳ ಶುಲ್ಕ ಪಡೆಯುವಂತಿಲ್ಲ. ಜುಲೈ 1 ರಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.