ಬೆಂಗಳೂರು: ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವುದರ ಜೊತೆಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ಸಚಿವ ಹಾಗೂ ಸ್ಥಳೀಯ ಶಾಸಕ ಆರ್ ಅಶೋಕ್ ರವರು ಸಾವಿರಾರು ಜನರಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.
Advertisement
ಕಷ್ಟದ ಸಮಯದಲ್ಲಿ ಮಾನವೀಯತೆಯನ್ನ ಮೆರೆಯುವುದು ಆ ಕ್ಷಣದ ತುರ್ತು ಅಗತ್ಯ ಎಂಬುದನ್ನ ನಿರಂತರ ರುಜುವಾತು ಮಾಡುತ್ತಾ ಬರುತ್ತಿರುವ ಸಚಿವ ಅಶೋಕ್ ಅವರು ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಕ್ಷೇತ್ರದ ಜನತೆಯ ಸಹಾಯಕ್ಕೆ ಮುಂದಾಗಿದ್ದಾರೆ. ಆದಾಯವಿಲ್ಲದೇ ಕಂಗೆಟ್ಟ ಜನತೆಗೆ ವಿಶ್ವಾಸ ತುಂಬುವುದರ ಜೊತೆಗೆ ಒಂದು ದಿನವೂ ಯಾರೂ ಉಪವಾಸ ಇರಕೂಡದು ಎಂಬ ಬದ್ಧತೆಯಿಂದಲೇ ನಿತ್ಯ ಆರು ಸಾವಿರ ಜನರಿಗೆ ತಮ್ಮ ಕಚೇರಿಯ ಆವರಣದಲ್ಲಿಯೇ ಪೌಷ್ಠಿಕ ಆಹಾರ ತಯಾರಿಸಿ ಕಾರ್ಯಕರ್ತರ ಮೂಲಕ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ನಿತ್ಯ ಜನತೆಯ ಹಸಿವು ನೀಗಿಸುವ ಕಾರ್ಯ ಅಬಾಧಿತವಾಗಿ ನಡೆಯುತ್ತಿದೆ.
Advertisement
Advertisement
ಜನರ ನಡುವೆಯೇ ಬೆಳೆದ ನಾಯಕನಿಗೆ ಜನತೆಯ ಸಮಸ್ಯೆ, ನೋವುಗಳು ಬೇಗ ಹೃದಯ ಮುಟ್ಟುತ್ತವೆ ಎಂಬ ಮಾತಿನಂತೆ ಅಶೋಕ್ ಅವರು ಜನಸಾಮಾನ್ಯರ ಪ್ರತಿನಿಧಿಯಾಗಿಯೇ ರಾಜಕೀಯದಲ್ಲಿ ಬೆಳೆದವರು. ಹೀಗಾಗಿ ತನ್ನನ್ನ ನಂಬಿದವರಿಗೆ, ತನ್ನ ಮೇಲೆ ವಿಶ್ವಾಸವಿಟ್ಟವರ ಬೆಂಬಲಕ್ಕೆ ನಿಲ್ಲುವ ಮೂಲಕ ಜನಾನುರಾಗಿ ನಾಯಕರಾದವರು. ಸದ್ಯ ಕೋವಿಡ್ ಮಹಾಮಾರಿ ಹಲವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ನಿಟ್ಟಿನಲ್ಲಿ ಕಂಗೆಟ್ಟ ಜನರಿಗೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಈಗ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದನ್ನೂ ಓದಿ: ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ
Advertisement
ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸೇರಿದಂತೆ ಹಲವು ಸಚಿವರು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ನಂತರದಲ್ಲಿ ಸಚಿವ ಆರ್ ಅಶೋಕ್ ಅವರು ಕ್ಷೇತ್ರದಲ್ಲಿ ಕೋವಿಡ್ ಗೆ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಹಾಗೂ ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಲಿದ್ದಾರೆ.
ಒಬ್ಬ ಜನಪ್ರತಿನಿಧಿಗೆ ಕರ್ತವ್ಯ ನಿಭಾವಣೆ ಅತೀ ಅಗತ್ಯ. ಆ ನಿಟ್ಟಿನಲ್ಲಿ ಅಶೋಕ ಅವರು ಸೂಕ್ತ ಸಮಯದಲ್ಲಿ ಅಗತ್ಯ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಯನ್ನ ಕುಟುಂಬಸ್ಥರು ಕೊಂಡಯ್ಯದೆ ಇದ್ದ ಕಾರಣಕ್ಕೆ ತಾವೇ ಖುದ್ದು ಕಾವೇರಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವ ಮೂಲಕ ಸಾವಿರಾರು ಜನರ ಪಾಲಿಗೆ ಬಂಧುವಾದರು. ಎಲ್ಲಾ ಅಂತಿಮ ಕಾರ್ಯಗಳನ್ನ ವಿಧಿವತ್ತಾಗಿ ನೆರವೇರಿಸುವ ಮೂಲಕ ಸತ್ತವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಿದರು. ಈಗ ಸಾವಿರಾರು ಜನರಿಗೆ ಪಡಿತರ ವಿತರಣೆ ಮೂಲಕ ಭರವಸೆ ಕಳೆದುಕೊಂಡವರಲ್ಲಿ ಆತ್ಮವಿಶ್ವಾಸ ತುಂಬಿ ಅವರ ಬೆಂಬಲಕ್ಕೆ ನಿಲ್ಲುವ ಮಹತ್ಕಾರ್ಯಕ್ಕೆ ಅಣಿಯಾಗಿದ್ದಾರೆ.