– ರಾಜೀನಾಮೆ ಬಗ್ಗೆ ಮಾತಾಡಿದ ಸಚಿವ ಆನಂದ್ ಸಿಂಗ್?
ಬೆಂಗಳೂರು: ಪದೇ ಪದೇ ಖಾತೆ ಮರುಹಂಚಿಕೆಯಿಂದಾಗಿ ಕೇಸರಿ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಆಪ್ತರ ಬಳಿ ಮಾತನಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಅಸಮಾಧಾನಿತ ಸಚಿವರ ಮನವೊಲಿಕೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪ ಒಂಬತ್ತು ದಿನಗಳಲ್ಲಿ ಮೂರನೇ ಬಾರಿಗೆ ಖಾತೆ ಮರು ಹಂಚಿಕೆಗೆ ಮುಂದಾಗಿರೋ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇಂದು ಸಂಜೆ ಅಥವಾ ಮಂಗಳವಾರ ಬೆಳಗ್ಗೆ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಗಳು ದಟ್ಟವಾಗಿವೆ.
ಮೂರನೇ ಬಾರಿಯೂ ಖಾತೆ ಪರಿಷ್ಕರಣೆಯಾದ್ರೂ ಸಚಿವ ಮಾಧುಸ್ವಾಮಿ ಅವರ ಅಸಮಾಧಾನ ಹೊರ ಹಾಕಿದ್ದಾರೆ. ಪರಿಸರ ಖಾತೆ ಒಪ್ಪಿಕೊಂಡಿದ್ರೂ ಮತ್ತೆ ಕೆಲವರ ಒತ್ತಡದಿಂದಾಗಿ ಮತ್ತೆ ಇಲಾಖೆ ಬದಲಿಸುತ್ತಿರೋದಕ್ಕೆ ಆನಂದ್ ಸಿಂಗ್ ಆಪ್ತರ ಬಳಿ ಅಸಮಾಧಾನ ಹೊರ ಹಾಕಿ, ಮಂಗಳವಾರ ಸಿಎಂ ಜೊತೆ ಮಾತನಾಡಿ ರಾಜೀನಾಮೆ ನೀಡುವ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.
ಖಾತೆ ಮರು ಹಂಚಿಕೆ ಅಸಮಾಧಾನಕ್ಕೆ ಮತ್ತೆ ಮುಲಾಮು!
– 9 ದಿನದಲ್ಲಿ 3ನೇ ಬಾರಿ ಅದಲು-ಬದಲು! https://t.co/6AiuPa9KWu#BSYCabinet #BJP #Cabinet #Minister #KannadaNews #KarnatakaPolitics #Madhuswamy
— PublicTV (@publictvnews) January 25, 2021
ಸಚಿವ ಮಾಧುಸ್ವಾಮಿ ಅವರಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್ ಪಡೆದು, ಪ್ರವಾಸೋದ್ಯಮ ಖಾತೆಯನ್ನ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ. ಆನಂದ್ ಸಿಂಗ್ ಗೆ ಪರಿಸರ ಇಲಾಖೆ ಬದಲಾಗಿ ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ನೀಡಲು ಸಿಎಂ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್ ನೀಡುವ ಸಾಧ್ಯತೆಗಳಿವೆ.