– ಎರಡೂ ಕುಟುಂಬಗಳಿಂದ ದೂರು ದಾಖಲು
ಲಕ್ನೋ: ಕೆಲ ದಿನಗಳ ಹಿಂದೆ ಎರಡರ ಮಗ್ಗಿ ಹೇಳಲು ಬರದಿದ್ದಕ್ಕೆ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಳು. ಇದೀಗ ಅದೇ ಮಾದರಿಯ ಪ್ರಕರಣವೊಂದು ಉತ್ತರ ಪ್ರದೇಶದ ಔರೈಯಾಜನಪದ್ ನಲ್ಲಿ ನಡೆದಿದ್ದು, ವಧುವಿನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
Advertisement
ಜೂನ್ 20ರಂದು ದಿನಗಳ ಹಿಂದೆ ಜಮಾಲಿಪುರ ಗ್ರಾಮದ ಅರ್ಜುನ್ ಎಂಬವರ ಮಗಳು ಅರ್ಚನಾ ಮದುವೆ ಶಿವಂ ನಿವಾಸಿ ವಂಶಿ ಯುವಕನ ಜೊತೆ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ಮದುವೆಗೆ ಒಪ್ಪಿದ ಹಿನ್ನೆಲೆ ಎಲ್ಲ ತಯಾರಿಯೂ ನಡೆದಿತ್ತು.
Advertisement
Advertisement
ಜೂನ್ 20ರಂದು ವರ ಮತ್ತು ಆತನ ಕುಟುಂಬಸ್ಥರು ರಾತ್ರಿ ವಧುವಿನ ನಿವಾಸಕ್ಕೆ ಆಗಮಿಸಿದ್ದಾರೆ. ವಧುವಿನ ಕುಟುಂಬಸ್ಥರು ನೀಡಿದ ಬೈಕ್ ಏರಿ ಬಂದ ಶಿವಂ, ದೊಡ್ಡ ಗ್ಲಾಸ್ ಕನ್ನಡಕ ಧರಿಸಿದ್ದರು. ಶಿವಂ ಕನ್ನಡಕ ನೋಡುತ್ತಿದ್ದಂತೆ ಅರ್ಚನಾ ಕುಟುಂಬಸ್ಥರಿಗೆ ದೃಷ್ಟಿ ದೋಷ ಹೆಚ್ಚಾಗಿರುವ ಬಗ್ಗೆ ಅನುಮಾನಗೊಂಡಿದ್ದರು.
Advertisement
ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಶಾಸ್ತ್ರಗಳು ಆರಂಭವಾಗಿದೆ. ಈ ವೇಳೆ ವಧುವಿನ ತಂದೆ ಕನ್ನಡಕ ತೆಗೆದು ಶಾಸ್ತ್ರ ಪೂರೈಸುವಂತೆ ಬಲವಂತ ಮಾಡಿದ್ದಾರೆ. ಮಾವ ಹೇಳಿದಂತೆ ಕನ್ನಡಕ ತೆಗೆದ ವಂಶಿಗೆ ಮುಂದೆ ಕುಳಿತಿರುವ ವ್ಯಕ್ತಿಯೂ ಸಹ ಕಾಣಿಸಿಲ್ಲ. ನಂತರ ಹಿಂದಿ ಪತ್ರಿಕೆ ನೀಡಿ ಓದಲು ಹೇಳಿದಾಗ ವಂಶಿ ಅಕ್ಷರ ಕಾಣದೇ ತಡವರಿಸಿದ್ದಾನೆ. ವಂಶಿಯ ದೃಷ್ಟಿದೋಷ ನೋಡಿದ ಅರ್ಚನಾ ತನಗೆ ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.
ಮಗಳ ಇಚ್ಛೆಯಂತೆ ಕುಟುಂಬಸ್ಥರು ಮದುವೆ ರದ್ದು ಮಾಡಿದ್ದಾರೆ. ವರದಕ್ಷಿಣೆ ರೂಪದಲ್ಲಿ ನೀಡಿದ್ದ ಹಣ, ಚಿನ್ನಾಭರಣ ಮತ್ತು ಬೈಕ್ ಹಿಂದಿರುಗಿಸುವಂತೆ ಕೇಳಿದ್ದಾರೆ. ಆದ್ರೆ ವಂಶಿ ಕುಟುಂಬಸ್ಥರಿಗೆ ಯಾವ ವಸ್ತುಗಳನ್ನು ಹಿಂದಿರುಗಿ ನೀಡಲ್ಲ ಅಂದಾಗ ವಧುವಿನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ನಮಗೆ ಅವಮಾನವಾಗಿದೆ ಎಂದು ಅರ್ಚನಾ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ವಂಶಿ ಕುಟುಂಬ ಪ್ರತಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್
ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಎಳೆದಾಟ- ಮದುವೆ ಕ್ಯಾನ್ಸಲ್ ಮಾಡಿದ ವಧು
ಇದನ್ನೂ ಓದಿ: ಪಾರ್ಲರ್ ಹೋಗಿದ್ದ ವಧುವಿನ ಮೊಬೈಲ್‍ಗೆ ಮೆಸೇಜ್- ಮದುವೆಯೇ ಕ್ಯಾನ್ಸಲ್