– 15 ದಿನದ ಹಿಂದೆ ಮದುವೆ, ಆತ್ಮಹತ್ಯೆ ಶಂಕೆ
– 3 ತಿಂಗಳ ಹಿಂದೆ ಪತ್ನಿಯ ಸಾವು
ಚಿಕ್ಕಬಳ್ಳಾಪುರ: ನಾಪತ್ತೆಯಾಗಿದ್ದ ತಂದೆ-ಮಗು ಶವವಾಗಿ ಕೃಷಿಹೊಂಡದಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣರಹಳ್ಳಿ ಬಳಿ ನಡೆದಿದೆ.
ರವಿ(35) ಹಾಗೂ 09 ತಿಂಗಳ ಮಗುವಿನ ಶವ ಕೃಷಿಹೊಂಡದಲ್ಲಿ ಪತ್ತೆಯಾಗಿದೆ. ತಂದೆ ಮತ್ತು ಮಗುವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಲವು ದಿನಗಳ ಹಿಂದೆ ರವಿ ಪತ್ನಿ ಸಾವನ್ನಪ್ಪಿದ್ದರು.
ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರವಿ ಪತ್ನಿ 3 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಳೆದ 15 ದಿನಗಳ ಹಿಂದೆ ಸಹ ರವಿ ಮತ್ತೊಂದು ಮದುವೆಯಾಗಿದ್ದನು. ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ರವಿ ಹಾಗೂ ಮಗು ಇಂದು ಬೆಳಗ್ಗೆ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.