ಹುಬ್ಬಳ್ಳಿ: ಮನೆ ಕೆಲಸವನ್ನು ಮಾಡುತ್ತಿದ್ದ ವೇಳೆಯಲ್ಲಿ ಪತಿಯೊಬ್ಬ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ತಾನೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ ಘಟನೆ ನಡೆದಿದೆ.
ಪವಿತ್ರಾ ಮಾದರ ಹಲ್ಲೆಗೊಳಗಾದ ಮಹಿಳೆ. ಪತಿ ಈರಪ್ಪ ಈಕೆ ಮೇಲೆ ಹಲ್ಲೆ ಮಾಡಿದ್ದಾನೆ. ದಂಪತಿ ಸುಳ್ಳ ಗ್ರಾಮದ ನಿವಾಸಿಗಳಾಗಿದ್ದಾರೆ. ಕಳೆದ ಮೂರು ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಜಗಳ ಅತಿರೇಕಕ್ಕೆ ಹೋದ ಕಾರಣ ಗಂಡ ಈರಪ್ಪ ಹೆಂಡತಿಯ ಪವಿತ್ರಾಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.
Advertisement
ಈ ವೇಳೆ ಪವಿತ್ರಾಗೆ ತೀವ್ರ ರಕ್ತಸಾವ್ರವಾಗಿ ಒದ್ದಾಡಿದ್ದಾಳೆ. ಆಗ ಪತಿ ತಾನೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಯನ್ನು ಕೊಡಿಸಿದ್ದಾನೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈರಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement