ರಾಯಚೂರು: ಮದ್ಯದ ಅಮಲಿನಲ್ಲಿ ಕೃಷ್ಣಾ ನದಿಯ ಪ್ರವಾಹವನ್ನು ಲೆಕ್ಕಿಸದೆ, ಕಂಠಪೂರ್ತಿ ಕುಡಿತು ವಾಲಾಡುತ್ತಲೇ ಜಲಾವೃತಗೊಂಡಿರುವ ಸೇತುವೆಯನ್ನು ದಾಟಿ ಬಂದಿರುವ ಘಟನೆ ನಡೆದಿದೆ.
Advertisement
ಜಿಲ್ಲೆಯ ದೇವದುರ್ಗದಲ್ಲಿ ಘಟನೆ ನಡೆದಿದ್ದು, ಯಾದಗಿರಿಯ ಕೊಳ್ಳೂರಿನಿಂದ ಇಲ್ಲಿನ ಹೂವಿನಹೆಡಗಿ ಸೇತುವೆ ದಾಟಿ ಬಂದಿದ್ದಾನೆ. ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಚಂದ್ರಶೇಖರ ಸೇತುವೆ ಮೇಲೆ ರಭಸದಿಂದ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ಕೈಯಲ್ಲಿ ಕಟ್ಟಿಗೆ ಹಿಡಿದು ಸೇತುವೆ ದಾಟಿ ಬಂದು ಸ್ಥಳೀಯರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಅಲ್ಲದೆ ಈ ವೇಳೆ ಸೇತುವೆ ಮೇಲಿದ್ದ ಕಸವನ್ನು ಕೋಲಿನಿಂದ ತೆಗೆದಿದ್ದಾನೆ.
Advertisement
Advertisement
ದುಸ್ಸಾಹಸದಿಂದ ಸೇತುವೆ ದಾಟಿ ಬಂದ ಚಂದ್ರಶೇಖರನನ್ನು ದೇವದುರ್ಗ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಮಾಹಿತಿ ನೀಡಿರುವ ಮದ್ಯ ವ್ಯಸನಿ ಚಂದ್ರಶೇಖರ್, ಪತ್ನಿ ಬೈದಿದ್ದಕ್ಕೆ ಮದ್ಯಪಾನ ಮಾಡಿ ಸೇತುವೆ ದಾಟಿ ಬಂದಿರುವುದಾಗಿ ಹೇಳಿದ್ದಾನೆ. ದೇವದುರ್ಗದವನಾದ ಚಂದ್ರಶೇಖರ್, ಪತ್ನಿಯ ತವರು ಮನೆ ಕೊಳ್ಳೂರಿಗೆ ತೆರಳಿದ್ದ. ಪ್ರವಾಹ ಹೆಚ್ಚಾಗಿದ್ದರಿಂದ ಪತ್ನಿಯ ತವರು ಮನೆಯಲ್ಲೇ ಉಳಿದಿದ್ದ. ಈ ವೇಳೆ ಜಗಳವಾಗಿದ್ದು, ಪತ್ನಿ ಬೈದಿದ್ದಕ್ಕೆ ಮದ್ಯದ ಅಮಲಿನಲ್ಲಿ ತುಂಬಿ ಹರಿಯುವ ಸೇತುವೆ ದಾಟಿ ದೇವದುರ್ಗಕ್ಕೆ ಬಂದಿದ್ದಾನೆ.