ನವದೆಹಲಿ: ಪತ್ನಿ ಜೊತೆ ರೋಹಿತ್ ಶರ್ಮಾ ವರ್ಕೌಟ್ ಮಾಡಿರುವ ವಿಡಿಯೋಗೆ ಯುಜುವೇಂದ್ರ ಚಹಲ್ ಮಾಡಿರುವ ಕಮೆಂಟ್ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಪತ್ನಿ ಮತ್ತು ಪುತ್ರಿ ಜೊತೆ ಯುಎಇ ತಲುಪಿದ್ದಾರೆ. ಯುಎಇ ತಲುಪಿರೋ ಆಟಗಾರರು ನಿಯಮಗಳನುಸಾರ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು. ಹೋಟೆಲ್ ಕ್ವಾರಂಟೈನ್ ನಲ್ಲಿರುವ ರೋಹಿತ್ ಶರ್ಮಾ ಫಿಟ್ನೆಸ್ ಕಾಪಾಡಿಕೊಳ್ಳಲು ವರ್ಕೌಟ್ ಮಾಡಿದ್ದಾರೆ. ರೋಹಿತ್ ಜೊತೆ ಪತ್ನಿ ವರ್ಕೌಟ್ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Stronger together ???? pic.twitter.com/fMlGiRWoHG
— Rohit Sharma (@ImRo45) August 25, 2020
ಈ ಬಾರಿ ಐಪಿಎಲ್ ನಲ್ಲಿ ಅತ್ತಿಗೆ ಜೊತೆ ಓಪನಿಂಗ್ ಆಡಲಿದ್ದೀರಾ ಅಣ್ಣ ಎಂದು ಚಹಲ್ ಕಮೆಂಟ್ ಮಾಡವ ಮೂಲಕ ರೋಹಿತ್ ಶರ್ಮಾರ ಕಾಲೆಳೆದಿದ್ದಾರೆ. ಕೊರೊನಾ ಹಿನ್ನೆಲೆ ಈ ಬಾರಿಯ ಐಪಿಎಲ್ ಪಂದ್ಯಗಳು ಯುಎಇ ನಲ್ಲಿ ನಡೆಯಲಿವೆ. ಯುಎಇ ತಲುಪಿರೋ ಆಟಗಾರರು ಕಡ್ಡಾಯವಾಗಿ ಆರು ದಿನ ಕ್ವಾರಂಟೈನ್ ಆಗಬೇಕು. ತದನಂತರ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು.
#Chahal pic.twitter.com/M3oMpFrQZA
— Vishal Kumar (@VishalSports123) August 25, 2020
ಐಪಿಎಲ್ ನಲ್ಲಿ ಮುಂಬೈ ಪ್ರಬಲ ತಂಡವಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾಲ್ಕು ಬಾರಿ ಟ್ರೋಫಿ ಗೆದ್ದಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮೊದಲ ಮ್ಯಾಚ್ ನಡೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ಸಿಎಸ್‍ಕೆ ತಂಡವನ್ನು ಸೋಲಿಸಿ ಮುಂಬೈ ಟ್ರೋಫಿ ಗೆದ್ದುಕೊಂಡಿತ್ತು. ರೋಹಿತ್ ಶರ್ಮಾ ಐಪಿಎಲ್ ನಲ್ಲಿ 188 ಪಂದ್ಯಗಳನ್ನಾಡಿದ್ದು, 4,898 ರನ್ ಗಳಿಸಿದ್ದಾರೆ.
2020ರ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಫೈನಲ್ ಮ್ಯಾಚ್ ನವೆಂಬರ್ 10ರಂದು ನಡೆಯಲಿದೆ. ಎರಡನೇ ಬಾರಿ ಐಪಿಎಲ್ ಪಂದ್ಯ ಯುಎಇ ನಲ್ಲಿ ಆಯೋಜನಗೊಂಡಿದೆ. 2014ರಲ್ಲಿ ಮೊದಲ ಬಾರಿ ಯುಎಇ ನಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು.