-ಎರಡನೇ ಮದ್ವೆಯಾಗಿದ್ದ ಮಹಿಳೆ
ಪಾಟ್ನಾ: ಪತ್ನಿ ಕೆಲಸಕ್ಕೆ ಹೋದಾಗ ಅಪ್ರಾಪ್ತ ಮಗಳ ಮೇಲೆ ತಂದೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಭಾಗಲಾಪುರದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಪತಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆ ಮಕ್ಕಳನ್ನು ಪತಿಯ ಬಳಿ ಬಿಟ್ಟು ಕೆಲಸಕ್ಕಾಗಿ ಆಸ್ಪತ್ರೆಗೆ ತೆರಳುತ್ತಿದ್ದರು. ಕೆಲಸದಿಂದ ನಾಲ್ಕು ದಿನಗಳ ಬಳಿಕ ಮನೆಗೆ ಹಿಂದಿರುಗಿದ ವೇಳೆ 8 ವರ್ಷದ ಪುತ್ರಿ ನಡೆದ ಘಟನೆಯನ್ನ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳ್ಕೊಂಡು ಬಂದು ಥಳಿಸಿದ ಸೊಸೆ!
ಬಂಗಾಳ ಮೂಲದ ಮಹಿಳೆ ಪತಿಯಿಂದ ದೂರವಾಗಿ ಭಾಗಲಪುರದಲ್ಲಿ ಮಕ್ಕಳೊಂದಿಗೆ ನೆಲೆಸಿದ್ದರು. ಆರಂಭದಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಆಟೋ ಚಾಲಕನ ಪರಿಚಯವಾಗಿತ್ತು. ಆಟೋ ಚಾಲಕನ ಹಂಡ್ತಿಯನ್ನ ಬಿಟ್ಟು ಒಂಟಿಯಾಗಿದ್ದನು. ಹೀಗಾಗಿ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಮದುವೆ ಆಗಿದ್ದರು. ಮದುವೆ ಬಳಿಕ ಮಹಿಳೆ ತನ್ನ ಮಕ್ಕಳೊಂದಿಗೆ ಪತಿ ಮನೆ ಸೇರಿದ್ದರು. ಇದನ್ನೂ ಓದಿ: ಲಾಕ್‍ಡೌನ್ ಅಡ್ಡಿ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆಗೈದ ಪತ್ನಿ!
ಆರಂಭದಲ್ಲಿ ಕೆಲಸ ಮಾಡಿಕೊಂಡಿದ್ದ ಪತಿ ಆಟೋ ಓಡಿಸೋದು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳ ತೊಡಗಿದೆ. ನಂತರ ಮಹಿಳೆಗೆ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದ್ರೆ ಮನೆಯಲ್ಲಿ ಖಾಲಿ ಕೂತಿದ್ದ ಪತಿ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಓರ್ವನ ಜೊತೆ ಮೂವರು ಮಹಿಳೆಯರನ್ನ ಬೆತ್ತಲೆ ಮಾಡಿ ಮೆರವಣಿಗೆ