ಮುಂಬೈ: ತನ್ನ ಪತ್ನಿಯ ಒಡವೆಗಳನ್ನು ಮಾರಾಟ ಮಾಡಿ ಉಚಿತವಾಗಿ ಆಕ್ಸಿಜನ್ ವಿತರಣೆ ಮಾಡುತ್ತಿರುವ ಮುಂಬೈನ ವ್ಯಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಂಬೈ ನಿವಾಸಿ ಪ್ಯಾಸ್ಕಲ್ ಸಲ್ಧಾನಾ ಅವರು ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಉಚಿತವಾಗಿ ಆಮ್ಲಜನಕವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ನನ್ನ ಪತ್ನಿ ಕಳೆದ 5 ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಡಯಾಲಿಸಿಸ್ ಇದೆ. ಈ ಕಾರಣದಿಂದಾಗಿ ನಮ್ಮ ಮನೆಯಲ್ಲಿ ಯಾವಾಗಲೂ ಆಕ್ಸಿಜನ್ ಸಿಲಿಂಡರ್‍ಗಳು ಇರುತ್ತವೆ. ಒಮ್ಮೆ ನಮ್ಮ ಪ್ರದೇಶದ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ ನನ್ನ ಪತಿಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಹೇಳಿದರು. ಆಗ ನಾನು ತಕ್ಷಣ ಪೂರೈಕೆ ಮಾಡಿದೆ ಎಂದು ಹೇಳಿದ್ದಾರೆ.
ಉಚಿತವಾಗಿ ಆಕ್ಸಿಜನ್ ನೀಡಿಲು ನನ್ನ ಪತ್ನಿಯನ್ನು ಕೇಳಿದೆ. ಆಭರಣಗಳನ್ನು ಮಾರಾಟ ಮಾಡಿ ಆಮ್ಲಜನಕವನ್ನು ಪೂರೈಕೆ ಮಾಡಿ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕೆ ಚಿನ್ನವನ್ನು ಮಾರಿ ಅದರಿಂದ 80,000ರೂನಲ್ಲಿ ಉಚಿತವಾಗಿ ಆಮ್ಲಜನಕವನ್ನು ನೀಡುತ್ತಿದ್ದೇವೆ ಎಂದು ಪ್ಯಾಸ್ಕಲ್ ಸಲ್ಧಾನಾ ಹೇಳಿದ್ದಾರೆ.