ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆ ಹಾಸನದಲ್ಲಿ ಜೋಡಿ ಕೊಲೆ ನಡೆದಿದ್ದು, ದುರುಳ ಪತಿ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತ್ನಿ ಮಂಜುಳಾ (30) ಹಾಗೂ ಮಂಜುಳಾ ತಾಯಿ ಭಾರತಿ (55) ರನ್ನು ಪತಿ ಶ್ರೀಧರ್ ಕೊಲೆ ಮಾಡಿದ್ದಾನೆ. ನಿನ್ನೆ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ವೇಳೆ ಪತಿ, ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನು ಕೊಚ್ಚಿ ಕೊಂದು ಅತ್ತೆಯನ್ನೂ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ
ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸ್‍ಪಿ ಶ್ರೀನಿವಾಸಗೌಡ, ಸಿಪಿಐ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶ್ರೀಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.