ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ತಮ್ಮ ಪತ್ನಿ, ನಟಿ ಅಪೇಕ್ಷಾ ಪುರೋಹಿತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ.
ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪತ್ನಿಯ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪವನ್ ಒಡೆಯರ್, ಅದ್ಭುತ ಸ್ನೇಹಿತೆ, ಮಹಾನ್ ವಾಗ್ಮಿ, ಈ ಒಡೆಯರ್‍ನ ಸಂಪೂರ್ಣ ಜೀವನದ ಒಡತಿ. ಈ ನಿನ್ನ ಹುಟ್ಟುಹಬ್ಬದ ದಿನದಂದು ನನ್ನ ಒಂದು ಬಿನ್ನಹ, ಗೂಗಲ್‍ಗೂ ಕನ್‍ಫ್ಯೂಸ್ ಮಾಡುವಂಥ ಪ್ರಶ್ನೆಗಳನ್ನು ಸ್ವಲ್ಪ ಕಡಿಮೆ ಮಾಡ್ಕೋ ಬಂಗಾರಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಂತಹ ಕಷ್ಟ ಬಂದ್ರೂ ಎದುರಿಸೋದನ್ನ ಕಲಿಸಿರುವುದೇ ದರ್ಶನ್ ಸರ್: ಪವನ್ ಒಡೆಯರ್
ಪತ್ನಿಯ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಕಾರ್ ಗಿಫ್ಟ್ ನೀಡಿದ್ದಾರೆ. ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ‘ತ್ರಿವೇಣಿ ಸಂಗಮ’, ‘ಕಿನ್ನರಿ’, ‘ಸಾಗುತ ದೂರ ದೂರ’ ‘ಮರಳಿ ಬಂದಳು ಸೀತೆ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.
& actually the celebration started like this… New one added to the family ❤️ thank you so much my love for wonderful gift @PavanWadeyar pic.twitter.com/VgImXZckRu
— Apeksha Purohit (@PurohitApeksha) May 26, 2020
ನಿರ್ದೇಶಕ ಪವನ್ ಒಡೆಯರ್ ‘ರಣವಿಕ್ರಮ’, ‘ನಟರಾಜ ಸರ್ವಿಸ್’, ‘ಗೂಗ್ಲಿ’, ‘ಗೋವಿಂದಾಯ ನಮಃ’ ಹಾಗೂ ‘ನಟ ಸಾರ್ವಭೌಮ’ ಸಿನಿಮಾಗಳನ್ನು ಮಾಡಿದ್ದಾರೆ.