– ಅಪ್ಪನ ಕೃತ್ಯಕ್ಕೆ ಮಗನ ಸಾಥ್
ಚಿಕ್ಕಬಳ್ಳಾಪುರ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ನಂಬಸಿದ್ದ ಪತಿ ಈಗ ಮಗನ ಜೊತೆ ಆರು ತಿಂಗಳ ನಂತರ ಕತ್ತಲ ಕೋಣೆ ಸೇರಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಪೂಸಗಾನದೊಡ್ಡಿ ಗ್ರಾಮದ ನರಸಿಂಹಪ್ಪ ಜೈಲು ಸೇರಿದ್ದಾನೆ. ಎಸ್.ಗೊಲ್ಲಹಳ್ಳಿಯ ಜ್ಯೋತಿ ಕೊಲೆಯಾದ ಮಹಿಳೆ. ನರಸಿಂಹಪ್ಪನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದರೂ ಜ್ಯೋತಿಯನ್ನ ಪ್ರೀತಿಸಿ ವಿವಾಹವಾಗಿದ್ದನು. ತನ್ನ 14 ವರ್ಷದ ಮಗಳ ಜೊತೆ ಪ್ರತ್ಯೇಕವಾಗಿರಲು ಮನೆ ನಿರ್ಮಿಸಲು ಹಣ ನೀಡುವಂತೆ ಜ್ಯೋತಿ ಪತಿಗೆ ಕೇಳಿದ್ದಳು. ಕೆಲ ದಿನಗಳಿಂದ ಪ್ರತ್ಯೇಕ ಮನೆಗಾಗಿ ಜ್ಯೋತಿ ಹಣ ನೀಡುವಂತೆ ಪತಿಗೆ ದುಂಬಾಲು ಬಿದಿದ್ದರು.
ಜುಲೈ 1ರಂದು ಪತ್ನಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನರಸಿಂಹಪ್ಪ ಕುಟುಂಬಸ್ಥರ ಜೊತೆ ಗ್ರಾಮಸ್ಥರನ್ನ ನಂಬಿಸಿದ್ದನು. ಇತ್ತೀಚೆಗೆ ಪತ್ನಿಯನ್ನ ಕೊಲೆ ಮಾಡಿರುವ ಬಗ್ಗೆ ಕೆಲ ಆಪ್ತರ ಬಳಿ ಹೇಳಿಕೊಂಡಿದ್ದನು. ಈ ವಿಷಯ ಜ್ಯೋತಿ ಕುಟುಂಬಸ್ಥರಿಗೆ ತಿಳಿದಿದೆ. ಕೂಡಲೇ ನರಸಿಂಹಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿ ದಿಬ್ಬರೂಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನರಸಿಂಹಪ್ಪ ಮತ್ತು ಆತನ ಮೊದಲ ಪತ್ನಿ ಮಗ ನವೀನ್ ನನ್ನು ಬಂಧಿಸಿದ್ದಾರೆ.