ದೆಹಲಿ: ಮಹಿಳೆಯೊಬ್ಬಳ ಕುಚೇಷ್ಟೆಯಿಂದ ಆಕೆಯ ಪತಿ ಕಂಗಾಲಾಗಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. ಪ್ಯಾಂಟ್ ಬೆಲ್ಟ್ ಅನ್ನು ನೆಲದ ಮೇಲೆ ಹಾಕಿ ಪತಿಯನ್ನು ಕೆಲಕಾಲ ಆತಂಕಕ್ಕೀಡು ಮಾಡಿದ್ದಾಳೆ. ಇದರ ವೀಡಿಯೋ ಕೂಡ ಮಾಡಿರುವ ಪತ್ನಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ ಗಳು ಬರುತ್ತಿವೆ.
ವೀಡಿಯೋದಲ್ಲೇನಿದೆ..?
ಪತಿಯನ್ನು ಗೋಳೊಯ್ದುಕೊಳ್ಳುವ ಸಲುವಾಗಿ ಬೆಲ್ಟ್ ಅನ್ನು ಕೋಣೆಯ ಬಾಗಿಲ ಬಳಿ ನೆಲದ ಮೇಲೆ ಇಟ್ಟಿದ್ದಾಳೆ. ನಂತರ ಬೇಬಿ ರೂಮಿನಲ್ಲಿ ಏನೋ ಇದೆ ಬನ್ನಿ ಎಂದು ಭಯಬಿದ್ದವಳಂತೆ ನಾಟಕ ಮಾಡುತ್ತಾ ಪತಿಯನ್ನು ಕರೆದಿದ್ದಾಳೆ.
View this post on Instagram
ಪತ್ನಿಯ ಗಾಬರಿಯ ಧ್ವನಿ ಕೇಳಿದ ಪತಿ ಕೂತೂಹಲದಿಂದಲೇ ರೂಮ್ ಬಾಗಿಲು ತೆರೆದಿದ್ದಾನೆ. ಹೀಗೆ ಒಳಗೆ ಬಂದ ಪತಿ ನೆಲದ ಮೇಲೆ ಬಿದ್ದಿದ್ದ ಬೆಲ್ಟ್ ನೋಡಿ ಹಾವು ಎಂದು ಭಾವಿಸಿ ಭಯಗೊಂಡು ಜೋರಾಗಿ ಕಿರುಚಿದ್ದಾನೆ. ಪತಿಯ ರಿಯಾಕ್ಷನ್ ಕಂಡ ಪತ್ನಿ ಜೋರಾಗಿ ನಕ್ಕಿದ್ದಾಳೆ. ಈ ವೇಳೆ ಪತಿ ಏನಿದು ಎಂದು ಪ್ರಶ್ನಿಸಿದಾಗ ಅದು ಬೆಲ್ಟ್ ಎಂದು ಉತ್ತರಿಸಿ ಮತ್ತೆ ನಕ್ಕಿದ್ದಾಳೆ.
ಪತಿಯನ್ನು ಫೂಲ್ ಮಾಡಿ ಪತ್ನಿಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋಗೆ ಕಾಮೆಂಟ್‍ಗಳ ಸುರಿ ಮಳೆಯೇ ಹರಿದು ಬರುತ್ತಿದೆ.