ಇಂದೋರ್: ಪತ್ನಿಯಿಂದ ದೂರವಿರಲು 26 ವರ್ಷದ ವ್ಯಕ್ತಿ ಭರ್ಜರಿ ನಾಟಕವಾಡಿದ್ದು, ತನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ.
ಮಧ್ಯ ಪ್ರದೇಶದ ಮಹೌ ನಿವಾಸಿ ಇದೇ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ತನ್ನ ಪತ್ನಿಯೊಂದಿಗೆ ದೂರವಿರಲು ಬಯಸಿದ್ದಾನೆ. ಹೀಗಾಗಿ ಪತ್ನಿಯಿಂದ ದೂರವಿರಲು ಕೊರೊನಾ ಪಾಸಿಟಿವ್ ನಾಟಕವಾಡಿದ್ದಾನೆ. ಖಾಸಗಿ ಆಸ್ಪತ್ರೆಯ ವೆಬ್‍ಸೈಟ್ ಮೂಲಕ ಬೇರೆ ವ್ಯಕ್ತಿಯ ಕೊರೊನಾ ಪಾಸಿಟಿವ್ ರಿಪೋರ್ಟ್ ಡೌನ್‍ಲೋಡ್ ಮಾಡಿಕೊಂಡು, ಅದಕ್ಕೆ ತನ್ನ ಹೆಸರನ್ನು ಸೇರಿಸಿದ್ದಾನೆ ಎಂದು ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯ ಇನ್‍ಚಾರ್ಜ್ ಸಂಜಯ್ ಶುಕ್ಲಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
Advertisement
Advertisement
ತನ್ನ ಕೊರೊನಾ ಪಾಸಿಟಿವ್ ನಕಲಿ ವರದಿಯನ್ನು ಕುಟುಂಸ್ಥರಿಗೆ ಕಳುಹಿಸಿದ್ದು, ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ, ಪಾಸಿಟಿವ್ ಆಗಲು ಹೇಗೆ ಸಾಧ್ಯ ಎಂದು ಮನೆಯವರಿಗೆ ಅನುಮಾನ ಮೂಡಿದೆ.
Advertisement
ವಾಟ್ಸಪ್ ಮೂಲಕ ತನ್ನ ತಂದೆ ಹಾಗೂ ಪತ್ನಿಗೆ ವ್ಯಕ್ತಿ ನಕಲಿ ರಿಪೋರ್ಟ್ ಕಳುಹಿಸಿ, ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇರಲಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಖಾಸಗಿ ಲ್ಯಾಬರೋಟರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಈ ವೇಳೆ ಕೊರೊನಾ ಪಾಸಿಟಿವ್ ಕುರಿತು ನಕಲಿ ವರದಿ ಪಡೆದಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಲ್ಯಾಬರೋಟರಿಯವರು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಬಳಿಕ ಸುಳ್ಳು ದಾಖಲೆ ಸೃಷ್ಟಿ ಸೇರಿದಂತೆ ಸಂಬಂಧಿಸಿದ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರ ಮುಂದೆ ಹಾಜರಾಗುವಂತೆ ವ್ಯಕ್ತಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ ಎಂದು ಶುಕ್ಲ ಅವರು ತಿಳಿಸಿದ್ದಾರೆ.