– ಪರಾರಿಯಾಗಿದ್ದ ಆರೋಪಿ ಬಂಧನ
ಭೋಪಾಲ್: ವ್ಯಕ್ತಿಯೊಬ್ಬ ಮೊದಲು ಪತ್ನಿಯನ್ನು ಕೊಂದು ನಂತರ ತನ್ನ ತಾಯಿಯ ಮೇಲೂ ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ.
ಮಧು (32) ಮೃತ ಪತ್ನಿ. ಆರೋಪಿಯನ್ನು ಮಧ್ಯ ಪ್ರದೇಶದ ಧಮ್ನೋಡ್ ನಿವಾಸಿ ಗೋಪಾಲ್ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
Advertisement
Advertisement
ಆರೋಪಿ ಮೊದಲು ತನ್ನ 32 ವರ್ಷದ ಪತ್ನಿ ಮಧುನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತನ್ನ ತಾಯಿ ಲಕ್ಷ್ಮಿಬಾಯಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಲಕ್ಷ್ಮಿಬಾಯಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿಯ ಸ್ಥಿತಿಯೂ ಗಂಭೀರವಾಗಿದೆ.
Advertisement
ಘಟನೆಯ ನಂತರ ಪರಾರಿಯಾಗಿದ್ದ ಆರೋಪಿ ಗೋಪಾಲ್ನನ್ನು ಸೈಲಾನಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿ ಪತ್ನಿ ಮತ್ತು ತಾಯಿಯ ಮೇಲೆ ಏಕೆ ಹಲ್ಲೆ ಮಾಡಿದ ಎಂಬುದು ಇನ್ನೂ ತಿಳಿದುಬಂದಿಲ್ಲ.