– ಎರಡು ಗಂಟೆ ವ್ಯಕ್ತಿಯ ಹೈಡ್ರಾಮಾ
– ನೋಡ ನೋಡ್ತಿದಂತೆ ಜಿಗಿದು ಪ್ರಾಣ ಬಿಟ್ಟ
ಚಂಡೀಗಢ: ವ್ಯಕ್ತಿಯೋರ್ವ ಪತ್ನಿಯನ್ನು ಕೊಂದು ನಗರದಲ್ಲಿಯ ನೀರಿನ ಟ್ಯಾಂಕ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ ಕಪೂರಥಲಾದಲ್ಲಿ ನಡೆದಿದೆ.
45 ವರ್ಷದ ರಾಜಕುಮಾರ್ ಮೃತ ವ್ಯಕ್ತಿ. ಪತ್ನಿ ಪ್ರಿಯಾ (40) ನಡೆತ ಮೇಲೆ ಅನುಮಾನಗೊಂಡಿದ್ದ ರಾಜಕುಮಾರ್ ಮನೆಯಲ್ಲಿ ಕೊಲೆ ಮಾಡಿದ್ದನು. ಕೊಲೆ ಬಳಿಕ ನಗರದಲ್ಲಿರುವ ಮೇಲೆತ್ತರದ ನೀರಿನ ಟ್ಯಾಂಕ್ ಮೇಲೆ ಮದ್ಯದ ಬಾಟಲ್ ಹಿಡಿದು ಬಂದು ನಿಂತಿದ್ದನು. ರಾಜಕುಮಾರ್ ಟ್ಯಾಂಕ್ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಹೇಳುತ್ತಿದ್ದನ್ನ ಕೇಳಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ
ಪೊಲೀಸರು ಸ್ಥಳಕ್ಕಾಗಮಿಸುತ್ತಲೇ ಮನೆಯಲ್ಲಿ ಪತ್ನಿಯನ್ನ ಕೊಂದಿರುವ ಬಗ್ಗೆ ರಾಜಕುಮಾರ್ ಹೇಳಿದ್ದಾನೆ. ಪೊಲೀಸರು ರಾಜಕುಮಾರ್ ಮನೆಗೆ ಹೋದಾಗ ಪ್ರಿಯಾ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ರಾಜಕುಮಾರ್ ನ ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ರಾಜಕುಮಾರ್ ನಿಂತಿದ್ದ ಜಾಗದ ಕೆಳಗೆ ಕೆಲ ಯುವಕರ ಸಹಾಯದಿಂದ ದೊಡ್ಡ ಬಲೆಯನ್ನ ಸಹ ಹಿಡಿದಿದ್ದರು. ಇದನ್ನೂ ಓದಿ: ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ
ಫೇಸ್‍ಬುಕ್ ಲೈವ್: ನೀರಿನ ಟ್ಯಾಂಕ್ ಮೇಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದ ರಾಜಕುಮಾರ್ ಪತ್ನಿಯನ್ನ ಕೊಲೆ ಮಾಡಿರುವ ಬಗ್ಗೆ ಹೇಳಿದ್ದಾನೆ. ಅದೇ ರೀತಿ ತನ್ನ ಸಂಸಾರ ಕೆಲವರಿಂದ ಹಾಳಾಯ್ತು ಎಂದು ಸುಮಾರು 20 ಜನರ ಹೆಸರು ಸಹ ಹೇಳಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ಈ ಹೈಡ್ರಾಮಾ ನಡೆದಿತ್ತು. ಇದನ್ನೂ ಓದಿ: ಡಿವೋರ್ಸ್ ನೀಡಿ ಪತಿಗೆ ಗೆಳತಿ ಜೊತೆ ಮದ್ವೆ ಮಾಡಿಸಿದ ಪತ್ನಿ
ಸುಮಾರು ಎರಡು ಗಂಟೆ ಬಳಿಕ ಎಲ್ಲರೂ ನೋಡ ನೋಡುತ್ತಿದ್ದಂತೆ ಕೆಳಗೆ ಜಿಗಿದಿದ್ದಾನೆ. ಕೆಳಗೆ ಬಲೆ ಹಿಡಿದಿದ್ದರು ರಾಜಕುಮಾರ್ ಮುಖ ನೆಲಕ್ಕೆ ತಾಗಿದ್ದರಿಂದ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ರಾಜಕುಮಾರ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!
ಮೃತ ರಾಜಕುಮಾರ್ ಫೇಸ್‍ಬುಕ್ ಲೈವ್ ನಲ್ಲಿ ಸುಮಾರು 20 ಜನರ ಹೆಸರು ಹೇಳಿದ್ದಾನೆ. ವೀಡಿಯೋಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. 20 ವರ್ಷಗಳ ಹಿಂದೆ ರಾಜು ಮತ್ತು ಪ್ರಿಯಾ ಪ್ರೇಮ ವಿವಾಹವಾಗಿದ್ದರು. ದಂಪತಿಗೆ 17 ವರ್ಷ ಮಗ ಮತ್ತು 16 ವರ್ಷದ ಮಗಳು ಇದ್ದಾಳೆ. ಎರಡೂ ಶವಗಳನ್ನ ಶವಾಗೃಹದಲ್ಲಿರಿಸಲಾಗಿದೆ ಎಂದು ಎಸ್.ಪಿ ಹೇಳಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ