ಚಿತ್ರದುರ್ಗ: ಹೆಂಡತಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಭಯದಿಂದ ಗಂಡನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ರಾಜು(32) ಮೃತನಾಗಿದ್ದಾನೆ. ರಂಗನಾಥಪುರದ ನಿವಾಸಿಯಾಗಿರುವ ರಾಜು ಪತ್ನಿ ರಶ್ಮಿಗೆ ಮೇ 27 ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಭಯಭೀತನಾದ ರಾಜು ತನ್ನ ಜಮೀನಿನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾನೆ.
ಪತ್ನಿಗೆ ಪಾಸಿಟಿವ್ ಬಂದ ಬೆನ್ನಲ್ಲೇ, ಗ್ರಾಮದಲ್ಲಿ ಆತಂಕ ನಿರ್ಮಾಣವಾಗದಿರಲಿ ಅಂತ ಅಂದು ಸಂಜೆ ಆಕೆಯನ್ನು ದೇವರಕೊಟ್ಟ ಗ್ರಾಮದಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿತ್ತು. ರಾಜು ಕೋವಿಡ್ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿತ್ತು. ಆದರೂ ತೀವ್ರ ಗಾಬರಿಗೊಂಡಿರುವ ರಾಜು ಭಯದಿಂದ ಆತ್ಮಹತ್ಯೆಗೆ ತಲೆ ಬಾಗಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನಿಂದ ಕುಟುಂಬಸ್ಥರಿಗೆ ಕೊರೊನಾ ತಗಲಬಾರದು- ಶಿಕ್ಷಕ ನೇಣಿಗೆ ಶರಣು
ತನಗೆ ಕೋವಿಡ್ ಬಂದಿದೆ ಎಂದು ಹೆದರಿ ಯುವಕನೊಬ್ಬ ಐಸೋಲೇಷನ್ ಇದ್ದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿತ್ತು. ಬಸವರಾಜ್ (30) ಆತ್ಮಹತ್ಯೆ ಮಾಡಿಕೊಂಡ ಸೋಂಕಿತ ಎಂದು ಹೇಳಲಾಗುತ್ತಿದ್ದು, ಎರಡು ದಿನಗಳ ಹಿಂದೆ ಬಸವರಾಜ್ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಬುಧವಾರ ಬಂದ ಕೋವಿಡ್ ರಿಪೋರ್ಟ್‌ನಲ್ಲಿ ಪಾಸಿಟಿವ್ ಎಂದು ದೃಢಪಟ್ಟಿತ್ತು. ಇದನ್ನೂ ಓದಿ: ಕೊರೊನಾಗೆ ಹೆದರಿ ಯುವಕ ಆತ್ಮಹತ್ಯೆ
ಹೀಗೆ ಕೊರೊನಾ ದಿಂದ ಹೆದರಿ ಅನೇಕರು ತಮ್ಮ ಪ್ರಾಣವನ್ನು ಕೆಳೆದುಕೊಂಡಿದ್ದಾರೆ. ದಂಪತಿಗಳಿಬ್ಬರಿಗೂ ಕೊರೊನಾ ಬಂದು ಸಾವನ್ನಪ್ಪಿರುವ ಅನೇಕ ಉದಾಹರಣೆಗಳಿವೆ ಹಾಗೂ ತಮ್ಮ ಸೋಂಕು ಮಕ್ಕಳಿಗೆ ತಗುಲಬಾರದು ಎಂದು ಪ್ರಾಣ ಕಳೆದುಕೊಂಡವರಿದ್ದಾರೆ. ತಂದೆ, ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.