– ಸ್ನಾನ ಮಾಡ್ತಿದ್ದಾಗ ವಿಡಿಯೋ ರೆಕಾರ್ಡ್
– ವಿಡಿಯೋ ಮೂಲಕ 2 ವರ್ಷ ಅತ್ಯಾಚಾರ
ಲಕ್ನೋ: 50 ವರ್ಷದ ವ್ಯಕ್ತಿಯೊಬ್ಬ ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ಇಟ್ಟುಕೊಂಡು ಎರಡು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಸಂತ್ರಸ್ತೆ ಸಿಕಂದರಾಬಾದ್ ಪಟ್ಟಣದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆರೋಪಿಯೂ ಕೂಡ ಅದೇ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಇದೀಗ ಮಹಿಳೆ ಉತ್ತರ ಪ್ರದೇಶ ಸಿಎಂ ಅವರ ಕಂಪ್ಲೇಂಟ್ ಪೋರ್ಟಲ್‍ನಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆ ಮತ್ತು ಆರೋಪಿ 50 ವರ್ಷದ ಪುರುಷ ಇಬ್ಬರೂ ಅಕ್ಕಪಕ್ಕದ ಬಾಡಿಗೆ ಮನೆಯಲ್ಲಿ ತಮ್ಮ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದರು. ಎರಡು ವರ್ಷದ ಹಿಂದೆ ಒಂದು ದಿನ ಆರೋಪಿ ಸಂತ್ರಸ್ತೆ ಸ್ನಾನ ಮಾಡುತ್ತಿರುವ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಒಂದು ದಿನ ಸಂತ್ರಸ್ತೆಯ ಪತಿ ರಾತ್ರಿಪಾಳಿಯ ಕೆಲಸಕ್ಕೆ ಹೋದ ತಕ್ಷಣ ಆರೋಪಿ ಯಾರಿಗೂ ಗೊತ್ತಾಗದ ಹಾಗೆ ಸಂತ್ರಸ್ತೆಯ ರೂಮಿಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಆ ವಿಡಿಯೋವನ್ನು ತೋರಿಸಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ನಂತರ ಎರಡು 2 ವರ್ಷ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದನು. ನಾನು ಇದಕ್ಕೆ ನಿರಾಕರಿಸಿದರೆ ತನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ತನ್ನ ನೋವನ್ನು ಹೇಳಿಕೊಂಡಿದ್ದಾರೆ.
10 ದಿನಗಳ ಹಿಂದೆ ಆರೋಪಿ ಮತ್ತೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆಗ ಸಂತ್ರಸ್ತೆ ಈ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾರೆ. ನಂತರ ಉತ್ತರ ಪ್ರದೇಶ ಸಿಎಂ ಅವರ ಕಂಪ್ಲೇಂಟ್ ಪೋರ್ಟಲ್‍ನಲ್ಲಿ ದೂರು ದಾಖಲಿಸಿದ್ದಾರೆ.
ಇದುವರೆಗೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ದೂರು ಬಂದಿಲ್ಲ. ಸಂತ್ರಸ್ತೆ ಲಿಖಿತ ದೂರು ನೀಡಿದರೆ ತಕ್ಷಣವೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಪೋರ್ಟಲ್ ಕಂಪ್ಲೇಂಟ್
ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹಿಂಜರಿಕೆ ಅಥವಾ ಭಯ ಇದ್ದರೆ ಈ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಆನ್‍ಲೈನ್ ಮೂಲಕ ಯಾವುದೇ ಊರಿನಲ್ಲಿ ಕುಳಿತು ದೂರು ದಾಖಲಿಸಲು ಇಲ್ಲಿ ಅವಕಾಶವಿದೆ.