– ಮದ್ವೆ ಬಳಿಕ ಇಬ್ಬರದ್ದೂ ಭಿನ್ನ ಹೇಳಿಕೆ
ಪಾಟ್ನಾ: ಪತಿಯೇ ತನ್ನ ಪತ್ನಿಯ ಮದುವೆಯನ್ನ ಆಕೆಯ ಪ್ರಿಯಕರನ ಜೊತೆ ಮಾಡಿಸಿರುವ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ. ಛಪ್ರಾದ ವಾರ್ಡ್-45ರ ಗೇಗಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆ ಬಳಿಕ ಕಳೆದ ಆರು ತಿಂಗಳಿನಿಂದ ಪತ್ನಿ ಮತ್ತು ಯುವಕ ಪ್ರೇಮಪಾಶದಲ್ಲಿ ಸಿಲುಕಿದ್ದರು. ಹಾಗಾಗಿ ಪತ್ನಿಯ ಇಚ್ಛೆಯಂತೆ ಪ್ರಿಯಕರನ ಜೊತೆ ಮದುವೆ ಮಾಡುತ್ತಿದ್ದೇನೆ. ನಾನು ಮತ್ತೊಂದು ಮದುವೆಯಾಗಿ ಮಗು ಸಾಕುತ್ತೇನೆ ಎಂದು ಪತಿ ಹೇಳಿದ್ದಾನೆ.
ಇತ್ತ ಮದುವೆ ಬಳಿಕ ಪತ್ನಿ, ನನ್ನ ಮೇಲೆ ಆತ ಹಲ್ಲೆ ನಡೆಸುತ್ತಿದ್ದನು. ಈಗ ಹೊಡೆಯಲು ಬಂದ್ರೆ ನಾನು ತಿರುಗಿ ಹೊಡೆಯುತ್ತೇನೆ. ಯುವಕನನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಇತ್ತ ಯುವಕ, ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾನೆ.
ವೀಡಿಯೋದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆ ನಡೆದಿದೆ. ಇತ್ತ ಪತಿ ಮಾತ್ರ ಖುಷಿಯಿಂದಲೇ ಪತ್ನಿ ಮದುವೆ ಮಾಡಿಸಿ ಯುವಕನ ಜೊತೆ ಕಳುಹಿಸಿದ್ದಾನೆ. ದಂಪತಿಯ ಮಗು ಪತಿ ಬಳಿಯಲ್ಲಿದೆ. ಇದನ್ನೂ ಓದಿ: ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ
ಸೇತುವೆ ಮೇಲೆ ನಡೆಯಿತು ವಿಶೇಷ ಮದುವೆ https://t.co/32EskYt4sY#Marriage #Bridge #Couple #KannadaNews
— PublicTV (@publictvnews) May 28, 2021