ಲಕ್ನೋ: ಹೊಸದಾಗಿ ಮದುವೆಯಾದ ವಧು ವರನಿಗೆ ಕಪಾಳ ಮೋಕ್ಷ ಮಾಡಿ ತವರು ಮನೆಗೆ ಹಿಂದಿರುಗಿದ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜೆಲ್ಲೆಯ ಖುತಾಹನ್ ಬ್ಲಾಕ್‍ನ ಲವಾಯೆನ್ ಗ್ರಾಮದಲ್ಲಿ ನಡೆದಿದೆ.
ಮದುವೆ ಮಂಟಪದಿಂದ ಕಾರಿನಲ್ಲಿ ನವಜೋಡಿ ವರನ ಮನೆಗೆ ಬಂದಿದ್ದಾರೆ. ಕಾರಿನಲ್ಲಿ ಬರುತ್ತಿರುವ ವಧುವನ್ನು ಸ್ವಾಗತಿಸಲು ವರನ ಕುಟುಂಬದವರು ತಯಾರಿ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ವರನೊಟ್ಟಿಗೆ ಬಂದ ವಧು ಕಾರಿನಿಂದ ಇಳಿದ ತಕ್ಷಣ ವರನ ಕಪಾಳಕ್ಕೆ ಹೊಡೆದಿದ್ದಾಳೆ. ನಂತರ ಮನೆಯೊಳಗೆ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಬದಲಾಯಿಸಿ, ಕ್ಯಾಶುಯಲ್ ವೇರ್ ಧರಿಸಿ ತವರ ಮನೆಗೆ ಮರಳಿದ್ದಾಳೆ.
ಮದುವೆ ಸಮಾರಂಭದ ನಂತರ ವರನ ಕುಟುಂಬವನ್ನು ವಧುವನ್ನು ಮನೆಗೆ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದ್ದು, ವಧು ತವರು ಮನೆಗೆ ಮರಳುತ್ತಿದ್ದಂತೆ ಈ ಸುದ್ದಿ ಊರಿಗೆಲ್ಲಾ ಹಬ್ಬಿದೆ.
ಈ ಕುರಿತಂತೆ ವಿಚಾರಣೆ ವೇಳೆ ವರ ಮತ್ತೊಬ್ಬರನ್ನು ಪ್ರೀತಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದನ್ನು ತಿಳಿದು ವಧು ದ್ರೋಹ ಮಾಡಿದ್ದಕ್ಕೆ ಸಿಟ್ಟಾಗಿ ವರನ ಕಪಾಳಕ್ಕೆ ಹೊಡೆದಿದ್ದಾಳೆ.
ವರ ಹಾಗೂ ವಧುವಿನ ಕುಟುಂಬದವರು ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ