ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ಮಹಾಶಯನೊಬ್ಬ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವಂತಹ ಘಟನೆ ಹೊಸಕೋಟೆ ಸಮೀಪದ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಕಮ್ಮ(26)ಳನ್ನು ಪತಿ ನರಸಿಂಹಮೂರ್ತಿ ಕೊಲೆ ಮಾಡಿದ್ದಾನೆ. 8 ವರ್ಷಗಳ ಹಿಂದೆ ಗ್ರಾಮದ ನರಸಿಂಹಮೂರ್ತಿ ಜೊತೆಗೆ ಸಾಕಮ್ಮ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಸಹ ಇದ್ದಾರೆ. ಆದರೆ ಸಂಸಾರದಲ್ಲಿ ಆಗಾಗ ಜಗಳವಾಗುತ್ತಿದ್ದು, ಕಳೆದ 15 ದಿನಗಳ ಹಿಂದೆ ಗಲಾಟೆ ವಿಕೋಪಕ್ಕೆ ಹೋಗಿ ಸಾಕಮ್ಮ ತವರು ಮನೆ ಸೇರಿದ್ದರು.
ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಭಾಗದ ಬಾಗಿಲಿನಿಂದ ಬಂದು ಸಾಕಮ್ಮ ಮೇಲೆ ಪತಿ ನರಸಿಂಹಮೂರ್ತಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದು, ಪತಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂದಗುಡಿ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.