ಪತಿಯನ್ನ ಕಟ್ಟಿ ಹಾಕಿ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

Public TV
1 Min Read
Farm house 2

– ತೋಟದ ಮನೆಯಲ್ಲಿ ವಾಸವಿದ್ದ ದಂಪತಿ

ಚಂಡೀಗಢ: ಪತಿಯನ್ನ ಕಟ್ಟಿ ಹಾಕಿ ಪತ್ನಿಯ ಮೇಲೆ ನಾಲ್ವರು ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ. ನೇಪಾಳ ಮೂಲದ ರೈತ ದಂಪತಿ ತೋಟದ ಮನೆಯಲ್ಲಿ ವಾಸವಾಗಿದ್ದರು.

ಗುರುವಾರ ಮನೆಗೆ ನುಗ್ಗಿದ ಐದು ಕಾಮ ಪಿಶಾಚಿಗಳು ಮೊದಲಿಗೆ ಪತಿಗೆ ಥಳಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಂತರ ಒಬೊಬ್ಬರಾಗಿ ಮಹಿಳೆಯ ಅತ್ಯಾಚಾರ ಎಸಗಿದ್ದಾರೆ. ಐದನೇ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಂತೆ ಮಹಿಳೆ ಆತನಿಂದ ತಪ್ಪಿಸಿಕಂಡು ಚಾಕು ಹಿಡಿದು ನಿಂತಿದ್ದಾರೆ. ಇದರಿಂದ ಭಯಗೊಂಡ ದುಷ್ಕರ್ಮಿಗಳು ಮನೆಯಿಂದ ಕಾಲ್ಕಿತ್ತಿದ್ದಾರೆ. ಶುಕ್ರವಾರ ಈ ಸಂಬಂಧ ನೇಪಾಳಿ ದಂಪತಿ ಛಛರೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Farm house 1

ನೇಪಾಳ ಮೂಲದ ದಂಪತಿ ಕಳೆದ 14 ವರ್ಷಗಳಿಂದ ರೈತರೊಬ್ಬರ ತೋಟದಲ್ಲಿ ವಾಸವಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಗುರುವಾರ ರಾತ್ರಿ ಮನೆಗೆ ನುಗ್ಗಿದ ಐವರು ಪತಿಯನ್ನ ಥಳಿಸಿ ಕಟ್ಟಿ ಹಾಕಿ ನನ್ನ ಮೇಲೆ ಎರಗಿದರು. ಐದನೇ ನನ್ನ ಮೇಲೆ ಎರಗುತ್ತಿದ್ದಂತೆ ಆತನನ್ನು ತಳ್ಳಿ ಅಡುಗೆ ಮನೆಯಲ್ಲಿದ್ದ ಚಾಕು ಹಿಡಿದುಕೊಂಡಿದ್ದರಿಂದ ಐವರು ಓಡಿ ಹೋದರು. ನಂತರ ಪತಿಯ ಕಟ್ಟು ಬಿಡಿಸಿ ನೆರೆಯ ರೈತರಿಗೆ ವಿಷಯ ತಿಳಿಸಿದೇವು ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.

rape s

ಐಪಿಸಿ ಸೆಕ್ಷನ್ 376 ಡಿ, 452, 506, 342, 34ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮಹಿಳೆಯ ಹೇಳಿಕೆ ಪ್ರಕಾರ ಆರೋಪಿಗಳೆಲ್ಲರೂ ಒಂದೇ ಸಮುದಾಯದವರೆಂದು ತಿಳಿದು ಬಂದಿದೆ. ಆರೋಪಿಗಳ ರೇಖಾಚಿತ್ರ ಬಿಡಿಸಲಾಗುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *