– ಬಾಣಂತಿ, ಮಗುವನ್ನು ಒತ್ತೆಯಾಳಾಗಿರಿಸಿಕೊಂಡು ಚಿತ್ರಹಿಂಸೆ
– ಪೊಲೀಸರಿಂದ 6 ಮಂದಿಯ ಬಂಧನ
ಧಾರವಾಡ: ಪಡೆದ ಸಾಲ ವಾಪಸ್ ಕೊಡದ ಹಿನ್ನೆಲೆಯಲ್ಲಿ ದುರುಳರು ಸಾಲ ಪಡೆದ ಮಗುವನ್ನೇ ಮಾರಾಟ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ರೂಪಾ ಮತ್ತು ಮೈನುದ್ದೀನ ದಂಪತಿಗೆ ಸೇರಿದ ಗಂಡು ಮಗುವನ್ನು ಉಡುಪಿ ಮೂಲದ ವೈದ್ಯ ದಂಪತಿಗೆ ಮಾರಾಟ ಮಾಡಲಾಗಿತ್ತು. ಸದ್ಯ ಪ್ರಕರಣ ಸಂಬಂಧ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಏನಿದು ಘಟನೆ..?
ಭಾರತೀ ವಾಲ್ಮೀಕಿ ಎಂಬವರ ಬಳಿ ರೂಪಾ 72 ಸಾವಿರ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ 1.50 ಲಕ್ಷ ಸಾಲ ಪಡೆದಿದ್ದರು. ಸಾಲ ಕಟ್ಟಲಾಗದ ವೇಳೆಯಲ್ಲಿಯೇ ರೂಪ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಬಾಣಂತಿ ಮತ್ತು ಮಗುವನ್ನು ಭಾರತಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಳು.
Advertisement
40 ದಿನ ಮನೆಯಲ್ಲೇ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಳು. ಬಳಿಕ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು ಮಗುವನ್ನು 2.50 ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಳು. ಇದರಲ್ಲಿ ಒಂದೂವರೆ ಲಕ್ಷ ತನ್ನ ಸಾಲ ಭರ್ತಿ ಮಾಡಿಕೊಂಡ ಭಾರತಿ ಉಳಿದ ಒಂದು ಲಕ್ಷವನ್ನು ರೂಪಗೆ ಕೊಟ್ಟಿದ್ದಳು.
Advertisement
ಇತ್ತ ಮಗು ಮಾರಾಟವಾದ ಐದು ತಿಂಗಳ ಬಳಿಕ ರೂಪ ಪೊಲೀಸ್ ಮೊರೆ ಹೋದಳು. ಪೊಲೀಸ್ ಅಧಿಕಾರಿಗಳಿಗೆ ರೂಪ ವಾಟ್ಸಪ್‍ನಲ್ಲಿ ಸಂದೇಶ ಕಳುಹಿಸಿದ್ದಳು. ವಾಟ್ಸಾಪ್ ಸಂದೇಶ ಆಧರಿಸಿ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಮಗು ಮಾರಿದ ಭಾರತಿ ಆಕೆಯ ಮಗ ರಮೇಶ್, ಅಳಿಯ ವಿನಾಯಕ ಹಾಗೂ ರವಿ ಹೆಗಡೆಯನ್ನು ಬಂಧಿಸಿದ್ದಾರೆ. ಅಲ್ಲದೆ ಮಗು ಪಡೆದಿದ್ದ ಉಡುಪಿಯ ವೈದ್ಯ ದಂಪತಿ ವಿಜಯ ನೆಗಳೂರ, ಚಿತ್ರಾ ದಂಪತಿಯನ್ನು ಸಹ ಪೊಲೀಸರು ವಶಕ್ಕೆ ಪಡೆದರು.
ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಲಾಗಿದ್ದು, ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.