-ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಆರ್‌ಸಿಬಿ
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2020ರ ಆವೃತಿಯಲ್ಲಿ 3ನೇ ಗೆಲುವು ಪಡೆದಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‍ಗಳ ಗೆಲುವು ಪಡೆದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 6 ಪಾಯಿಂಟ್ ಗಳೊಂದಿಗೆ ನಂ.1 ಸ್ಥಾನಕ್ಕೆ ಏರಿದೆ.
ಪಡಿಕ್ಕಲ್ (63 ರನ್), ವಿರಾಟ್ ಕೊಹ್ಲಿ (72 ರನ್) ಅರ್ಧ ಶತಕದ ನೆರವಿನಿಂದ 155 ರನ್‍ಗಳ ಗುರಿಯನ್ನು 5 ಎಸೆತ ಬಾಕಿ ಇರುವಂತೆಯೇ ಆರ್‌ಸಿಬಿ ಗುರಿ ಮುಟ್ಟಿತು. 19.1 ಓವರ್ ನಲ್ಲಿ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.
Advertisement
That’s that from Abu Dhabi as @RCBTweets win by 8 wickets to register their third win in #Dream11IPL 2020.#RCBvRR pic.twitter.com/CY2Col5a0y
— IndianPremierLeague (@IPL) October 3, 2020
Advertisement
155 ರನ್ ಗಳ ಸ್ಪರ್ಧತ್ಮಾಕ ರನ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಬೌಂಡರಿ, ಸಿಕ್ಸರ್ ಮೂಲಕ ಸ್ಫೋಟಕ ಆರಂಭವನ್ನೇ ನೀಡಿದರು. ಆದರೆ ತಂಡ 2.3 ಓವರ್ ಗಳಲ್ಲಿ 25 ರನ್ ಗಳಿಸಿದ್ದ ವೇಳೆ ಫಿಂಚ್, ಗೋಪಾಲ್‍ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ರಾಜಸ್ಥಾನ ತಂಡ ನಾಯಕ ತೆಗೆದುಕೊಂಡ ಡಿಆರ್‍ಎಸ್ ಮನವಿ ಸಫಲತೆಯನ್ನು ನೀಡಿತ್ತು.
Advertisement
ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿದ್ದ ಪಡಿಕ್ಕಲ್ ಜೊತೆ ಕೂಡಿಕೊಂಡ ನಾಯಕ ಕೊಹ್ಲಿ ತಾಳ್ಮೆ ಆಟಕ್ಕೆ ಮುಂದಾದರು. ಪವರ್ ಪ್ಲೇ ಅಂತ್ಯ ವೇಳೆಗೆ ಆರ್‌ಸಿಬಿ ವಿಕೆಟ್ ಕಳೆದುಕೊಂಡು 50 ರನ್ ಗಳಿಸಿತ್ತು.
Advertisement
Virat Kohli breaches the 5500 run mark in IPL.#Dream11IPL pic.twitter.com/OYZjtfRtzC
— IndianPremierLeague (@IPL) October 3, 2020
ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್: ಇನ್ನಿಂಗ್ಸ್ ಆರಂಭದಿಂದಲೂ ರಾಜಸ್ಥಾನ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ಇನಿಂಗ್ಸ್ ನಲ್ಲಿ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, 15 ಓವರಿನ 5ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಫಾರ್ಮ್‍ಗೆ ಮರಳಿದ ಕೊಹ್ಲಿ: ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದರು. ಇನ್ಸಿಂಗ್ ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 8 ಇನ್ನಿಂಗ್ಸ್ ಗಳ ಬಳಿಕ ಕೊಹ್ಲಿ ಅರ್ಧ ಶತಕ ಗಳಿಸಿದ್ದರು. ಇನ್ಸಿಂಗ್‍ನಲ್ಲಿ 71 ರನ್ ಗಳಿಸಿದ್ದ ಸಂದರ್ಭದಲ್ಲಿ ಕೊಹ್ಲಿ ಐಪಿಎಲ್‍ನಲ್ಲಿ 5500 ರನ್‍ಗಳನ್ನು ಪೂರ್ಣಗೊಳಿಸಿದರು.
ಪಂದ್ಯದಲ್ಲಿ ಪಡಿಕ್ಕಲ್, ಕೊಹ್ಲಿ ಜೋಡಿ 80 ಎಸೆತಗಳಲ್ಲಿ 99 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣವಾಯಿತು. ನಾಯಕ ಕೊಹ್ಲಿ ಅಂತಿಮವಾಗಿ 53 ಎಸೆತಗಳಲ್ಲಿ 7 ಬೌಂಡತರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ಅಜೇಯರಾಗಿ ಉಳಿದರು. ಉಳಿದಂತೆ ಆರ್ ಸಿಬಿ ಪರ ಫಿಂಚ್ 8 ರನ್, ಎಬಿಡಿ ಔಟಾಗದೆ 10 ಎಸೆತಗಳಲ್ಲಿ 12 ರನ್ ಗಳಿಸಿದರು.
ಇದಕ್ಕೂ ಮುನ್ನ ಆರ್‌ಸಿಬಿ ಸ್ಪಿನ್ ಮಾಂತ್ರಿಕ ಚಹಲ್, ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ಪರ ಚಹಲ್ ಪ್ರಮುಖ 3 ವಿಕೆಟ್ ಪಡೆದರೆ, ಉದಾನಾ 2 ಹಾಗೂ ಸೈನಿ 1 ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ಪರ ಲೊಮರ್ ಗಳಿಸಿದ ತಾಳ್ಮೆಯ 47 ರನ್ ಹಾಗೂ ಅಂತಿಮ ಸ್ಲಾಗ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದ್ದು, ರಾಜಸ್ಥಾನ ತಂಡ ಇನ್ನಿಂಗ್ಸ್ ನಲ್ಲಿ ಸ್ಪಧಾತ್ಮಕ ಮೊತ್ತ ದಾಖಲಿಸಲು ಕಾರಣವಾಯ್ತು.