ಪಟಾಕಿ ಸ್ಫೋಟಕ್ಕೆ 16 ಮಂದಿ ಬಲಿ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

Public TV
1 Min Read
fire crackers web 2

– ಪ್ರಧಾನಿ ಮೋದಿ ಸಂತಾಪ

ತಮಿಳುನಾಡು: ಫೆಬ್ರವರಿ 13ರಂದು ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

PM MODI 2

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಘಾತಕಾರಿಯಾಗಿದೆ. ನಾನು ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗಿದ್ದೇನೆ. ಘಟನೆ ವೇಳೆ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಸದ್ಯ ಅನಾಹುತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುವಲ್ಲಿ ಕಾರ್ಯ ನಿರತರಾಗಿದ್ದಾರೆ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪಿಎಮ್‍ಎನ್‍ಆರ್‍ಎಫ್ ವತಿಯಿಂದ 2 ಲಕ್ಷ ರೂ. ಮತ್ತು ಗಂಭೀರವಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.

fire crackers 3

ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ರಾಸಾಯನಿಕಗಳನ್ನು ಬೆರೆಸುವಾಗ ಉಂಟಾದ ಘರ್ಷಣೆಯಿಂದ ಅವಘಡ ಸಂಭವಿಸಿದೆ. ಬೆಂಕಿ ನಾಂದಿಸಲು ವಿವಿಧ ಸ್ಥಳಗಳಿಂದ ಹತ್ತು ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಧಾವಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮೃತಪಟ್ಟ ಕುಟುಂಬಸ್ಥರಿಗೆ 3 ಲಕ್ಷ ರೂ.ವನ್ನು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 1 ಲಕ್ಷರೂ ಪರಿಹಾರ ಘೋಷಿಸಿದ್ದಾರೆ.

Share This Article