ಶಾರ್ಜಾ: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯ ನಡೆಯುವುದಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ನಡೆಸಿದ ದೈಹಿಕ ಕಸರತ್ತಿನ ವಿಡಿಯೋ ಈಗ ವೈರಲ್ ಆಗಿದೆ.
ಮೈದಾನದಲ್ಲಿ ಸಹ ಆಟಗಾರರ ಜೊತೆ ಕೊಹ್ಲಿ ವ್ಯಾಯಾಮ ಮಾಡುತ್ತಿದ್ದರು. ಆದರೆ ಈ ವೇಳೆ ಕೊಹ್ಲಿ ಡ್ಯಾನ್ಸ್ ಮಾಡುತ್ತಾ ವ್ಯಾಯಾಮ ಮಾಡಿದ್ದಾರೆ. ಒಮ್ಮೆ ಕುಳಿತುಕೊಂಡೇ ಕೈಯನ್ನು ಅಲ್ಲಡಿಸುತ್ತಾ ನೃತ್ಯ ಮಾಡಿದರೆ ಮತ್ತೊಮ್ಮೆ ಬೆನ್ನನ್ನು ನೆಲಕ್ಕೆ ಹಾಕುತ್ತಾ ನೃತ್ಯ ಮಾಡಿದ್ದಾರೆ.
Advertisement
https://twitter.com/LogicalBakwaas/status/1316732878714142721
Advertisement
ವ್ಯಾಯಾಮದ ವೇಳೆ ಕೊಹ್ಲಿ ಬಹಳ ಸಂಭ್ರಮದಲ್ಲಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಫ್ರಿದಿಗೆ ಸಹಾಯ, ಧೋನಿಗೆ ವ್ಯಂಗ್ಯ- ಬಜ್ಜಿ ವಿರುದ್ಧ ಧೋನಿ ಫ್ಯಾನ್ಸ್ ಫೈರ್
Advertisement
He really knows how to enjoy on a cricket field. ????????????????????????@imVkohli #viratkholi https://t.co/P5GjZMETGL
— Heming R Desai ???????? (@heming_RD) October 15, 2020
Advertisement
ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ವಿರಾಟ್ ಕೊಹ್ಲಿ 48 ರನ್(39 ಎಸೆತ, 3 ಬೌಂಡರಿ) ಹೊಡೆದು ಔಟಾದರು.
https://twitter.com/MasterOfChase/status/1316734986951839753
17.5 ಓವರ್‌ಗಳಲ್ಲಿ ತಂಡದ ಮೊತ್ತ136 ಆಗಿದ್ದಾಗ ಕೊಹ್ಲಿ 6ನೇಯವರಾಗಿ ಔಟಾದರು. ನಂತರ ಕ್ರಿಸ್ ಮೋರಿಸ್ ಮತ್ತು ಉದಾನಾ ಅವರು 13 ಎಸೆತಗಳಲ್ಲಿ 35 ರನ್ ಹೊಡೆದರು. ಕ್ರೀಸ್ ಮೋರಿಸ್ 25 ರನ್(8 ಎಸೆತ, 1 ಬೌಂಡರಿ, 3 ಸಿಕ್ಸರ್) ಉದಾನಾ 10 ರನ್(5 ಎಸೆತ, 1 ಸಿಕ್ಸರ್) ಹೊಡೆದು ಅಜೇಯರಾಗಿ ಉಳಿದರು.
At the halfway mark, #RCB are 83/2. How many more runs will they add to the tally by the end of the innings?#Dream11IPL pic.twitter.com/LwMmQTtsjE
— IndianPremierLeague (@IPL) October 15, 2020