– ಮೂವರು ಆಟಗಾರರು ಐಸೋಲೇಷನ್
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಕೀಪರ್ ರಿಷಭ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ, ತಂಡದ ಥ್ರೋಡೌನ್ ತಜ್ಞ ದಯಾನಂದ್ ಗರಾನಿ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.
Advertisement
ಇಂದು ಪಂತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಬಿಸಿಸಿಐ ದೃಢಪಡಿಸಿತ್ತು. ಆ ಬಳಿಕ ಇದೀಗ ಗರಾನಿ ಅವರಿಗೆ ಸೋಂಕು ತಗುಲಿರುವುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವೃದ್ಧಿಮಾನ್ ಸಹಾ ಸಹಿತ ಇನ್ನಿಬ್ಬರೂ ಆಟಗಾರು ಐಸೋಲೇಷನ್‍ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ರಿಷಭ್ ಪಂತ್‍ಗೆ ಕೊರೊನಾ ಪಾಸಿಟಿವ್
Advertisement
Advertisement
ಪಂತ್ ಕೊರೊನಾ ಸೋಂಕು ದೃಢಪಟ್ಟ ಬಳಿಕ ಗರಾನಿ ಅವರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಯಿತು ಈ ವೇಳೆ ಇವರಿಗೆ ಪಾಸಿಟಿವ್ ಬಂದಿದೆ. ಆ ಬಳಿಕ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ನೆಟ್ ಬೌಲರ್ ಅಭಿಮನ್ಯು ಈಶ್ವರನ್ ಮತ್ತು ವೃದ್ಧಿಮಾನ್ ಸಹಾ ಅವರನ್ನು 10 ದಿನಗಳ ಕಾಲ ಐಸೋಲೇಷನ್‍ಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದೆ.
Advertisement
???? NEWS: #TeamIndia off to Durham; Two members test positive
Wicket-keeper batsman Rishabh Pant, who tested positive for COVID-19 on 8th July, nears completion of his self-quarantine period while training assistant/net bowler Dayanand Garani has tested positive.
Details ????
— BCCI (@BCCI) July 15, 2021
ಭಾರತ ತಂಡದ ಇತರ ಸದಸ್ಯರು ಗುರುವಾರ ಡರ್ಹಾಮ್‍ಗೆ ತೆರಳಿ ಬಳಿಕ ಅಭ್ಯಾಸ ಪಂದ್ಯವಾಡಲಿದ್ದಾರೆ. ಪಂತ್ ಮತ್ತು ಸಹಾ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ.