ದುಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಪಡೆದಿದೆ.
Advertisement
ಭರ್ಜರಿ 97 ರನ್ ಅಂತರದ ಗೆಲುವು ಪಡೆದ ಪಂಜಾಬ್ ತಂಡ ಟೂರ್ನಿಯಲ್ಲಿ ಮೊದಲ ಸಿಹಿ ಸವಿದಿದೆ. ಅಲ್ಲದೇ ಪಂದ್ಯದಲ್ಲಿ ಶತಕ ಸಿಡಿಸಿದ ನಾಯಕ ಕೆಎಲ್ ರಾಹುಲ್ ಪಂದ್ಯವನ್ನು ಸ್ಮರಣೀಯ ಮಾಡಿಕೊಂಡಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಸನ್‍ರೈಸರ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ಆರ್‌ಸಿಬಿಗೆ ಹೆಚ್ಚಿನ ಆತ್ಮವಿಶ್ವಾಸವೇ ಮುಳುವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Advertisement
????
What an innings this by the @lionsdenkxip Skipper.
Take a bow, @klrahul11 pic.twitter.com/eHDDlVzTaJ
— IndianPremierLeague (@IPL) September 24, 2020
Advertisement
ಪಂದ್ಯದಲ್ಲಿ ಪಂಜಾಬ್ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾಗಿದ್ದು ನಾಯಕ ಕೆಎಲ್ ರಾಹುಲ್, ಇನ್ಸಿಂಗ್‍ನ ಡೆತ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಕೈಹಾಕಿದ ರಾಹುಲ್ ಎರಡು ಕ್ಯಾಚ್‍ಗಳನ್ನು ನೀಡಿದ್ದರು. ಆದರೆ ಕೊಹ್ಲಿ ಈ ಅವಕಾಶಗಳನ್ನು ಕೈಚೆಲ್ಲಿದ್ದರು. ಒಂದೊಮ್ಮೆ ಕೊಹ್ಲಿ ಕ್ಯಾಚ್‍ಗಳನ್ನು ಪಡೆದಿದ್ದರೇ ಪಂಜಾಬ್ ತಂಡವನ್ನು 180 ರನ್ ಒಳಗೆ ಮೊತ್ತಕ್ಕೆ ಕಟ್ಟಿ ಹಾಕುವ ಅವಕಾಶವಿತ್ತು.
Advertisement
ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಚಹಲ್, ಸೈನಿ ಅವರನ್ನು ಕೊಹ್ಲಿ ಈ ಪಂದ್ಯದಲ್ಲಿ ಉತ್ತಮವಾಗಿ ಬಳಸಿಕೊಳ್ಳಲಿಲ್ಲ. ಉತ್ತಮ ಫಾರ್ಮ್ ನಲ್ಲಿರುವ ಬೌಲರ್ ಗಳನ್ನು ಇನ್ನಿಂಗ್ಸ್ ನ ಕೊನೆ ಓವರ್ ಎಸೆಯಲು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ಕೊಹ್ಲಿ ತಮ್ಮ ಪ್ಲಾನ್‍ನಲ್ಲಿ ಎಡವಿದ ಕಾರಣ ಅಂತಿಮ ಓವರ್ ಗಳಲ್ಲಿ ಪಂಜಾಬ್ ಆಟಗಾರರು ಹೆಚ್ಚು ರನ್ ಸಿಡಿಸಿದರು.
ಆರ್‌ಸಿಬಿ ಫಿಂಚ್, ಕೊಹ್ಲಿ, ಎಬಿ ಡಿವಿಲಿಯರ್ಸ್ ರಂತಹ ಬಲಿಷ್ಠ ಬ್ಯಾಟಿಂಗ್ ಲೈನ್ ಹೊಂದಿದೆ. ಆದರೆ ಪಂದ್ಯದಲ್ಲಿ 207 ರನ್ ಟಾರ್ಗೆಟ್ ಪಡೆದ ಸಂರ್ಭದಲ್ಲಿ ಒತ್ತಡಕ್ಕೆ ಸಿಲುಕಿದ ಆಟಗಾರರಿಗೆ ಸ್ಫೋಟಕ ಆರಂಭ ಪಡೆಯವುದು ಅನಿವಾರ್ಯವಾಗಿತ್ತು. ಆದ್ದರಿಂದ ಹೆಚ್ಚು ಅಕ್ರಮಣಕಾರಿಯಾಗಿ ಆಟಗಾರರು ಬ್ಯಾಟ್ ಬೀಸಿದ್ದರು. ಇದು ಬಹುಬೇಗ ಆರ್‌ಸಿಬಿ ಮೊದಲ ಮೂರು ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಳ್ಳಲು ಕಾರಣವಾಗಿತ್ತು. ಬೃಹತ್ ರನ್ ಚೇಸ್ ಮಾಡುವ ಒತ್ತಡ ಆರ್‌ಸಿಬಿ ಬ್ಯಾಟ್ಸ್ ಮನ್‍ಗಳಿಗೆ ದೀರ್ಘ ಇನ್ಸಿಂಗ್ ಆಡಲು ಅವಕಾಶ ನೀಡಲಿಲ್ಲ.
Proud recipients of the Orange and Purple caps respectively.#Dream11IPL pic.twitter.com/1jQZ8J9Wq4
— IndianPremierLeague (@IPL) September 24, 2020