– ಹೈಕಮಾಂಡ್ ಸಮಿತಿ ಮುಂದೆ ಹಾಜರಾದ ‘ಕೈ’ ಶಾಸಕರು
ನವದೆಹಲಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನೆಲೆ ಹೈಕಮಾಂಡ್ ತನ್ನ ಎಲ್ಲ ಶಾಸಕರು ಮತ್ತು ಸಚಿವರನ್ನ ಕರೆಸಿ ಸಭೆ ನಡೆಸಿದೆ. ಪಂಜಾಬ್ ಕಾಂಗ್ರೆಸ್ ಶಾಸಕರ ಸಮಸ್ಯೆ ಹೈಕಮಾಂಡ್ ಮೂವರು ಸದಸ್ಯರ ಸಮಿತಿ ಸಹ ರಚಿಸಿತ್ತು. ಇಂದು ಎಲ್ಲ ಶಾಸಕರು ಸಮಿತಿ ಮುಂದೆ ಹಾಜರಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ, ನವಜೋತ್ ಸಿಂಗ್ ಸಿಧು ಸತ್ಯಕ್ಕೆ ಸೋಲಿಲ್ಲ ಎಂಬ ಮಾತುಗಳನ್ನಾಡಿದ್ದಾರೆ.
Advertisement
ಹೈಕಮಾಂಡ್ ಸೂಚನೆ ಹಿನ್ನೆಲೆ ನಾವು ದೆಹಲಿಗೆ ಬಂದಿದ್ದೇವೆ. ಪಂಜಾಬ್ ಜನತೆಯನ್ನ ಧ್ವನಿಯನ್ನ ತಲುಪಿಸಲು ಆಗಮಿಸಿದ್ದೇನೆ. ಪಂಜಾಬಿನ ಸತ್ಯ ಮತ್ತು ಹಕ್ಕಿನ ಧ್ವನಿಯಾಗಿ ಪ್ರತಿನಿಧಿಸಿದ್ದೇನೆ ಎಂದು ಸಿಧು ಹೇಳಿದ್ದಾರೆ.
Advertisement
ಪ್ರಜಾಪ್ರಭುತ್ವದ ಪಂಜಾಬ್ ಜನರ ಶಕ್ತಿ. ಅದು ಅವರಿಗೆ ಸಿಗುವಂತಾಗಬೇಕು. ಅದರ ಪರ ನನ್ನ ನಿಲುವು ಮತ್ತು ಅದಕ್ಕೆ ಬದ್ಧ. ಸತ್ಯಕ್ಕೆ ಯಾವಾಗಲೂ ಸೋಲಿಲ್ಲ, ನಾವು ಪಂಜಾಬ್ ಗೆಲ್ಲಿಸಬೇಕಿದೆ ಎಂದರು.
Advertisement
I came here to present people's voices from grass root level to High Command. My stand on democratic power remains the same. The power of the people must return to the people. I have clearly stated the truth: Navjot Singh Sidhu, Punjab MLA after meeting Congress leaders in Delhi pic.twitter.com/38HlKbPR31
— ANI (@ANI) June 1, 2021
Advertisement
ಮುಂದಿನ ವರ್ಷದ ಆರಂಭದಲ್ಲಿಯೇ ಪಂಜಾಬ್ ಚುನಾವಣೆ ಎದುರಿಸಬೇಕಿದೆ. ಸಿಎಂ ಅಮರಿಂದರ್ ಸಿಂಗ್ ಕಾರ್ಯವೈಖರಿ ಬಗ್ಗೆ ವಿರುದ್ಧ 24ಕ್ಕೂ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಸಿಎಂ ಪೂರ್ಣ ಮಾಡಿಲ್ಲ. ಇದು ಚುನಾವಣೆಯ ಪರಿಣಾಮ ಬೀರಲಿದೆ ಎಂದು ಸಚಿವರು ಸೇರಿದಂತೆ ಶಾಸಕರು ಸಭೆಯಲ್ಲಿ ಬೇಸರ ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ.