– ಹೈಬ್ರಿಡ್ ಶಿಕ್ಷಣ ಪದ್ದತಿ ಜಾರಿ
– ಕಾಲೇಜಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ
ಬೆಂಗಳೂರು: ಕೊರೊನಾ ಇಳಿಮುಖವಾಗುತ್ತಿರುವ ಹೊತ್ತಲ್ಲಿ ರಾಜ್ಯ ಸರ್ಕಾರ, ಕಾಲೇಜು ಓಪನ್ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸರಿ ಸುಮಾರು ಏಳು ತಿಂಗಳ ಬಳಿಕ ರಾಜ್ಯದಲ್ಲಿ ಡಿಗ್ರಿ ಕಾಲೇಜುಗಳನ್ನು ತೆರೆಯುವ ಸಾಹಸವನ್ನು ಮಾಡಿದೆ.
ನವೆಂಬರ್ 17ಕ್ಕೆ ಪದವಿ ಕಾಲೇಜುಗಳು ಆರಂಭ ಆಗಲಿವೆ. ಮುಂಜಾಗ್ರತಾ ಕ್ರಮವಾಗಿ ಆರಂಭದಲ್ಲಿ ಹೈಬ್ರಿಡ್ ಶಿಕ್ಷಣ ಪದ್ದತಿಯನ್ನು ಸರ್ಕಾರ ಜಾರಿ ಮಾಡುತ್ತಿದೆ ವಿದ್ಯಾರ್ಥಿಗಳು ಆಫ್‍ಲೈನ್ ಅಥವಾ ಆನ್‍ಲೈನ್ ಮೂಲಕವೂ ತರಗತಿಗೆ ಹಾಜರಾಗುವ ಅವಕಾಶವನ್ನು ಈ ಹೈಬ್ರಿಡ್ ಶಿಕ್ಷಣ ಪದ್ದತಿ ನೀಡಲಿದೆ.
Advertisement
Advertisement
ಎಂಜಿನಿಯರಿಂಗ್, ಮೆಡಿಕಲ್, ಪದವಿ, ಡಿಪ್ಲೊಮೋ ಕ್ಲಾಸ್ ಆರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸಭೆ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಮತ್ತು ಡಿಸಿಎಂ ಅಶ್ವಥ್ ನಾರಾಯಣ್, ನವೆಂಬರ್ 17ಕ್ಕೂ ಮೊದಲು ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್‍ಗೆ ಹಾಜರಾಗುವ ಬಗ್ಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನ ಅಳವಡಿಸಿಕೊಂಡು ಕಾಲೇಜು ಪ್ರಾರಂಭಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಸಿದ್ದಪಡಿಸಿದೆ. ಪ್ರಮುಖವಾಗಿ ಕಾಲೇಜು ಪ್ರಾರಂಭವಾದರೂ ಕಾಲೇಜಿಗೆ ಬರಬೇಕಾ ಬೇಡವಾ ಅಂತ ವಿದ್ಯಾರ್ಥಿಗಳು ನಿರ್ಧಾರ ಮಾಡಬಹುದಾಗಿದೆ. ಕಾಲೇಜಿಗೆ ಬರಲು ಒಪ್ಪದೇ ಇದ್ದರೆ ಆನ್ ಲೈನ್ ಮೂಲಕ ತರಗತಿ ತೆಗೆದುಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಯಾರಿಗೂ ಕಾಲೇಜಿಗೆ ಬರಲು ಒತ್ತಾಯ ಮಾಡುವಂತಿಲ್ಲ. ಇದರ ಜೊತೆ ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರುವ ಷರತ್ತು ವಿಧಿಸಿದೆ. ಕಾಲೇಜಿಗೆ ಬರಲು ಇಚ್ಚಿಸುವ ವಿದ್ಯಾರ್ಥಿ ನವೆಂಬರ್ 17ರ ಒಳಗೆ ಕಾಲೇಜಿಗೆ ಹೋಗಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.
Advertisement
ನವೆಂಬರ್ 17ರಿಂದಲೇ ಹಾಸ್ಟೆಲ್‍ಗಳು ಆರಂಭ ಆಗಲಿವೆ. ಆದರೆ 1 ರಿಂದ 10ನೇ ತರಗತಿ ಮತ್ತು ಪಿಯು ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ.
????
ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ.
ಮಾನ್ಯ ಮುಖ್ಯಮಂತ್ರಿ @BSYBJP ಅವರ ನೇತೃತ್ವದಲ್ಲಿ ಕಾಲೇಜು ಆರಂಭದ ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕಾಲೇಜುಗಳ ಪುನರಾರಂಭ ಕುರಿತು ಎಲ್ಲ ಇಲಾಖೆಗಳ ಜತೆ ಚರ್ಚಿಸಲಾಗಿದೆ.@CMofKarnataka
1/3 pic.twitter.com/70lJIMVy6G
— Dr. Ashwathnarayan C. N. (@drashwathcn) October 23, 2020
ಮಾರ್ಗಸೂಚಿ ಏನಿದೆ?
* ನಿತ್ಯ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಕಡ್ಡಾಯ
* ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
* ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು
* ತರಗತಿ ಮುಗಿದ ಬಳಿಕ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು
* ಪ್ರತಿ ಕ್ಯಾಂಪಸ್‍ಗಳಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭಿಸಬೇಕು
UGC ಯ #COVID19 ಮಾರ್ಗಸೂಚಿಯ ಅನುಗುಣವಾಗಿ ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಹಾಗೂ ಪ್ರತಿ ಕಾಲೇಜಿನಲ್ಲಿ ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗುವುದು.
3/3
— Dr. Ashwathnarayan C. N. (@drashwathcn) October 23, 2020
* ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು
* ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದ ಬಗ್ಗೆ ಅಗತ್ಯ ಜಾಗೃತಿ ಮೂಡಿಸಬೇಕು
* ಕನಿಷ್ಠ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು
* ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಶುಚಿತ್ವ ಕಾಪಾಡಬೇಕು
* ವಾಹನ ವ್ಯವಸ್ಥೆ ಇರೋ ಕಾಲೇಜುಗಳು ನಿತ್ಯ ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು
* ಶೈಕ್ಷಣಿಕ ವರ್ಷ ತಡವಾಗಿರೋದ್ರಿಂದ ಶನಿವಾರ ಪೂರ್ತಿ ತರಗತಿ, ರಜೆಗಳಿಗೆ ಬ್ರೇಕ್ ಹಾಕಲು ನಿರ್ಧಾರ
* ಶನಿವಾರ-ಭಾನುವಾರ ಆನ್‍ಲೈನ್ ತರಗತಿಗೆ ಹೆಚ್ಚು ಒತ್ತು ನೀಡುವುದು
* ಶಿಫ್ಟ್ ಪ್ರಕಾರ ತರಗತಿ ನಡೆಸಲು ನಿರ್ಧಾರ
* ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಲು ಅವಕಾಶ
* ಮಾರ್ಗಸೂಚಿ ಅನುಷ್ಠಾನಕ್ಕೆ ಪ್ರಾಂಶುಪಾಲರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚನೆ
* ಜಿಲ್ಲಾ ಹಂತದಲ್ಲಿ ಡಿಸಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ
* ಕಾಲೇಜಿಗೆ ಬಾರದ ವಿದ್ಯಾರ್ಥಿಗಳನ್ನು ತರಗತಿಗೆ ಕರೆತರಲು ಮೆಂಟರ್ ಸಿಸ್ಟಮ್ ಜಾರಿ
* ಪ್ರತಿ ಉಪನ್ಯಾಸಕರಿಗೆ 30 ವಿದ್ಯಾರ್ಥಿಗಳ ಜವಾಬ್ದಾರಿ ನೀಡಲು ತೀರ್ಮಾನ