ಬೆಂಗಳೂರು: ಕೊರೊನಾ ಎರಡನೇ ಅಲೆಗೆ ಈ ಹೊಸ ವರ್ಷದ ದಿನವೇ ಮುಹೂರ್ತ ಫಿಕ್ಸ್ ಆಗಲಿದೆ. ರಾಜ್ಯ ಸರ್ಕಾರ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಕಂಪ್ಲೀಟ್ ಬ್ರೇಕ್ ಹಾಕದೇ ಕೆಲ ನಿಬಂಧನೆಗಳನ್ನು ಹಾಕಿ ಹೊಸ ವರ್ಷ ಆಚರಣೆಗೆ ಅನುಮತಿ ನೀಡಲು ಸಿದ್ಧವಾಗುತ್ತಿದೆ.
ಹೊಸ ವರ್ಷವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು ಎಂದು ತಿಳಿಸಿರೋ ಸರ್ಕಾರ ಮನೆಯಲ್ಲೇ ಪಾರ್ಟಿ ಮಾಡಿ ಎಂದಿದೆ. ಜೊತೆಗೆ ಹೋಟೆಲ್, ಬಾರ್ ಮತ್ತು ಪಬ್‍ಗಳಲ್ಲಿ ಶೇ 50ರಷ್ಟು ಆಸನಗಳನ್ನು ಇಟ್ಟುಕೊಂಡು ಓಪನ್ ಮಾಡಿ ಆಚರಣೆ ಮಾಡಬಹುದು ಎಂದಿದೆ.
ಇದಕ್ಕೆ ಆರೋಗ್ಯ ತಜ್ಞರು ವಿರೋಧ ವ್ಯಕ್ತ ಪಡಿಸಿದ್ದು, ಶೇ 50ರಷ್ಟು ಆಸನಗಳಿಗೆ ಅನುಮತಿ ನೀಡಿದರೂ ಸಹ ಅಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡೋಲ್ಲ. ಪಾರ್ಟಿಯಲ್ಲಿ ಕೊರೊನಾ ನಿಯಮಗಳ ಪಾಲನೆ ಆಗೋದು ಸುಳ್ಳು ಜನ ಸೇರೋದರಿಂದ ಕೊರೊನಾ ಸ್ಫೋಟವಾಗುತ್ತೆ. ಸರ್ಕಾರ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಕಂಪ್ಲೀಟ್ ಬ್ರೇಕ್ ಹಾಕಬೇಕು, ಇಲ್ಲವಾದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗೋದು ಪಕ್ಕ ಅಂತಾ ಎಚ್ಚರಿಕೆ ನೀಡಿದ್ದಾರೆ.