ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಮುಷ್ಕರ ಮುಂದುವರಿಕೆ ಮಾಡಿರುವ ಹಿನ್ನೆಲೆಯಲ್ಲಿ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಖಾಸಗಿ ಚಾಲಕ ಹಾಗೂ ನಿರ್ವಾಹಕರ ಮೂಲಕ ಬಸ್ ಓಡಿಸಲು ಚಿಂತನೆ ನಡೆಸಲಾಗಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ಅನಾನುಕೂಲ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಖಾಸಗಿ ಚಾಲಕರನ್ನು ತರುವ ಪ್ಲಾನ್ ಇದೀಗ ಸರ್ಕಾರದ ಮುಂದೆ ಇದೆ. ನಾಳೆ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ರೆ ಖಾಸಗಿ ಚಾಲಕರ ಮೂಲಕ ಬಸ್ ಓಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ನಾಳೆ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ನೌಕರರಿಗೆ ಡೆಡ್‍ಲೈನ್ ನೀಡಿದೆ.
ಇನ್ನೊಂದೆಡೆ ಕರ್ತವ್ಯ ಹಾಜರಾಗದಿದ್ದರೆ ಎಸ್ಮಾ ಹಾಕಲು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಖಾಸಗಿ ಚಾಲಕ- ನಿರ್ವಾಹಕರು ಮೂಲಕ ಬಸ್ ಓಡಿಸುವುದು ಹಾಗೂ ಎಸ್ಮಾ ಜಾರಿಗೊಳಿಸುವ ಮೂಲಕ ಸರ್ಕಾರ, ನೌಕರರ ಮುಷ್ಕರ ಹತ್ತಿಕ್ಕಲು ಎರಡು ಸೂತ್ರ ರೂಪಿಸಿದೆ ಎನ್ನಲಾಗಿದೆ.