ನವದೆಹಲಿ: ಭಾರತೀಯ ನೌಕಪಡೆ ಅರಬ್ಬಿ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೀನುಗಾರಿಕ ಹಡಗಿನ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 320 ಕೆಜಿ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
INS Suvarna, on surveillance patrol in the Arabian Sea, encountered a fishing vessel with suspicious movements. To investigate the vessel, the ship’s team conducted boarding and search operation, which led to the seizure of more than 300 Kgs of narcotics substances: Indian Navy pic.twitter.com/L9wFfbuPcF
— ANI (@ANI) April 19, 2021
Advertisement
ನೌಕಾಪಡೆಯ ಐಎನ್‍ಎಸ್ ಸುವರ್ಣ ತಂಡವು ಬೋರ್ಡಿಂಗ್ ಮತ್ತು ಶೋಧಕಾರ್ಯಚರಣೆಯಲ್ಲಿ ತೊಡಗಿತ್ತು. ಈ ವೇಳೆ ಪಾಕಿಸ್ತಾನ ಮೂಲದ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ಇದು ಭಾರತ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
Advertisement
ವಶಪಡಿಸಿಕೊಂಡಿರುವ ಮಾದಕದ್ರವ್ಯದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ 3,000 ಕೋಟಿ ರೂಪಾಯಿ ಎಂದು ವರದಿಯಾಗಿದ್ದು. ಹಲವು ದಿನಗಳಿಂದ ಹಡಗಿನಲ್ಲಿ ಮಾದಕ ದ್ರವ್ಯ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನೌಕಪಡೆಗೆ ದೊಡ್ಡ ಬೇಟೆ ಸಿಕ್ಕಂತಾಗಿದೆ.
Advertisement
ಹಡಗಿನಲ್ಲಿದ್ದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಹಡಗನ್ನು ಕೊಚ್ಚಿ ಬಂದರಿಗೆ ತಂದು ನಿಲ್ಲಿಸಲಾಗಿದ್ದು, ಹಡಗಿನಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
Advertisement