-ನಡುಮನೆಯಲ್ಲಿ ಏಕಾಏಕಿ ಕುಸಿದ ಭೂಮಿ
ಧಾರವಾಡ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಬಹುತೇಕ ಕಡೆ ಮನೆಗಳು ಕುಸಿದು ಬೀಳುತ್ತಿದ್ದು, ನೋಡು ನೋಡುತ್ತಿದ್ದಂತೆ ದೊಡ್ಡ ಮಣ್ಣಿನ ಮನೆಯೊಂದು ಧಾರಾಶಾಹಿಯಾಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
ನಗರದ ಕಮಲಾಪುರದ ಬಡಾವಣೆಯಲ್ಲಿ ಮನೆ ಕುಸಿದು ಬಿದ್ದಿದ್ದು, ಎಲ್ಲಪ್ಪ ಶಿವಪುತ್ರಪ್ಪ ತಿಕ್ಕುಂಡಿ ಅವರ ಮನೆ ಮನೆ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಮನೆ ಬೀಳುವ ಮುನ್ಸೂಚನೆಯನ್ನು ಅರಿತ ಕುಟುಂಬದವರು ಕ್ಷಣಾರ್ಧದಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದ ಕಾರಣ ಸಂಭವಿಸಬಹುದಾದ ದುರಂತ ತಪ್ಪಿದೆ.
ವಿಡಿಯೋದಲ್ಲಿ ಕಣ್ಣೇದುರೇ ಮನೆ ಕುಸಿದು ಬೀಳುತ್ತಿರುವುದನ್ನು ಕಂಡ ಮನೆಯ ಒಡತಿ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ನಗರದ ಮೃತ್ಯುಂಜಯ ನಗರದಲ್ಲಿ ಕೂಡಾ ಮನೆಯೊಂದರಲ್ಲಿ ಭೂ ಕುಸಿತವಾಗಿದೆ. ನಾಗಮ್ಮ ಸಾರೆಯವರ ಮನೆಯಲ್ಲಿ ಭೂಮಿ ಕುಸಿದು ಆಳದ ಗುಂಡಿಯೊಂದು ಬಿದಿದ್ದು, ಅದರಲ್ಲಿ ಇರುವ ನೀರನ್ನು ಕುಟುಂಬದವರು ಹೊರಹಾಕುವ ಕೆಲಸ ಮಾಡುತ್ತಿದ್ದಾರೆ